ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಗೃಹಿಣಿಯರಿಗೆ ಇಷ್ಟಾರ್ಥ ಸಿದ್ಧಿಯಾಗಲಿದೆ. ದಿನದಂತ್ಯಕ್ಕೆ ಅಚ್ಚರಿಯ ವಾರ್ತೆ ಕೇಳಿಬರಲಿದೆ. ಸಂಗಾತಿಯ ಮಾತುಗಳು ಮನಸ್ಸಿಗೆ ಕಿರಿ ಕಿರಿ ಎನಿಸಬಹುದು. ತಾಳ್ಮೆಯಿಂದ ನಿಭಾಯಿಸಿ. ಉದ್ಯೋಗ ರಂಗದಲ್ಲಿ ಬಯಸಿದ ಸ್ಥಾನ ಪಡೆಯಲು ಪರಿಶ್ರಮಪಡಬೇಕಾದೀತು.ವೃಷಭ: ಆರ್ಥಿಕವಾಗಿ ಲೆಕ್ಕಾಚಾರವಿಟ್ಟುಕೊಳ್ಳದೇ ಇದ್ದರೆ ತೊಂದರೆಯಾದೀತು. ಸರಕಾರಿ ಅಧಿಕಾರಿಗಳಿಗೆ ಹಿನ್ನಡೆಯಾದೀತು. ಹಿರಿಯರಿಗೆ ದೇಹಾರೋಗ್ಯದಲ್ಲಿ ಏರುಪೇರಾಗಲಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.ಮಿಥುನ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ. ನಿರುದ್ಯೋಗಿಗಳಿಗೆ