ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ದೇಹಾರೋಗ್ಯದ ಮೇಲೆ ಕಾಳಜಿಯಿರಲಿ. ಉದ್ಯೋಗ ಬದಲಾವಣೆಯ ಅವಕಾಶಗಳು ಕಂಡುಬರಲಿವೆ. ಸಾಂಸಾರಿಕವಾಗಿ ನೆಮ್ಮದಿ ತೋರಿಬಂದರೂ ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಲಿವೆ. ಸಂಚಾರದಲ್ಲಿ ಜಾಗ್ರತೆ.ವೃಷಭ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಉನ್ನತಿಗೆ ಅವಕಾಶಗಳು ಒದಗಿಬರಲಿವೆ. ಅವಿವಾಹಿತರಿಗೆ ವಿವಾಹ ಪ್ರಯತ್ನಗಳಿಗೆ ಕೊನೆಯ ಕ್ಷಣದಲ್ಲಿ ಹಿನ್ನಡೆಯಾದೀತು. ತಾಳ್ಮೆಯಿಂದಿರಿ. ವೃತ್ತಿರಂಗದಲ್ಲಿ ಹೆಚ್ಚಿನ ಯಶಸ್ಸಿಗೆ ಪರಿಶ್ರಮಪಡಬೇಕಾದೀತು.ಮಿಥುನ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿಬರಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.