Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 16 ಮಾರ್ಚ್ 2020 (08:51 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ನಿರ್ಧಾರಗಳು ನಿಮಗೆ ಹಿಡಿಸದೇ ಹೋಗಬಹುದು. ತಾಳ್ಮೆ ಕಳೆದುಕೊಳ್ಳಬೇಡಿ. ಸಂಗಾತಿಯ ಅಸಮಾಧಾನಕ್ಕೆ ಗುರಿಯಾಗಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
 
ವೃಷಭ: ವೃತ್ತಿರಂಗದಲ್ಲಿ ಅನಿರೀಕ್ಷಿತ ಬದಲಾವಣೆಯಾಗುವ ಸಂಭವವಿದೆ. ಮಿತ್ರರ ಸಹಾಯದಿಂದ ಸಂಭಾವ್ಯ ಅಪಾಯದಿಂದ ಪಾರಾಗುವಿರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಕಾರ್ಯನಿಮಿತ್ತ ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.
 
ಮಿಥುನ: ಕಾರ್ಯಕ್ಷೇತ್ರದಲ್ಲಿ ಕಷ್ಟಗಳು ಬಂದಾಗ ನಿಮ್ಮ ಕ್ರಿಯಾಶೀಲತೆಯೇ ನೆರವಿಗೆ ಬರುವುದು. ತಪ್ಪು ಮಾಡದೇ ಅಪರಾಧಿ ಎನಿಸಿಕೊಳ್ಳುತ್ತೀರಿ. ಅಪರಿಚಿತರನ್ನು ವಿಪರೀತ ನಂಬಲು ಹೋಗಬೇಡಿ. ಸಂಗಾತಿಯಿಂದ ಸಾಂತ್ವನ ಸಿಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
 
ಕರ್ಕಟಕ: ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಅಂದುಕೊಂಡ ಕಾರ್ಯಗಳು ಸುಲಭವಾಗಿ ನೆರವೇರಲಿದೆ. ಸಾಮಾಜಿಕವಾಗಿ ಉನ್ನತ ಸ್ಥಾನ ಮಾನ ಗಳಿಸಲಿದ್ದೀರಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ದುಂದು ವೆಚ್ಚ ಬೇಡ.
 
ಸಿಂಹ: ನಿರುದ್ಯೋಗಿಗಳು ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಲಿದ್ದೀರಿ. ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಮಾಡಲು ಚಿಂತನೆ ನಡೆಸಲಿದ್ದೀರಿ. ಗೃಹೋಪಯೋಗಿ ವಸ್ತುಗಳಿಗಾಗಿ ಖರ್ಚು ವೆಚ್ಚ ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆ.
 
ಕನ್ಯಾ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಬಗ್ಗೆ ಕೇಳಿಬರುವ ಇಲ್ಲಸಲ್ಲದ ಮಾತುಗಳನ್ನು ಅಲಕ್ಷಿಸುವುದೇ ಉತ್ತಮ. ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾಗುತ್ತದೆ. ಸಹೋದರರೊಂದಿಗೆ ಕಿರಿ ಕಿರಿಯಾಗದಂತೆ ಎಚ್ಚರವಹಿಸಿ. ದೇವತಾ ಪ್ರಾರ್ಥನೆ ಮಾಡಿ.
 
ತುಲಾ: ಮನಸ್ಸನ್ನು ಹತೋಟಿಗೆ ಇಟ್ಟುಕೊಳ್ಳಲು ಪ್ರಯತ್ನಿಸಿದರೂ ಬೇಡದ ಚಿಂತೆ ಕಾಡುವುದು ಬಿಡಲ್ಲ. ಕೆಲಸದಲ್ಲಿ ನಿರುತ್ಸಾಹ ತೋರಿಬರುವುದು. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.
 
ವೃಶ್ಚಿಕ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಉತ್ತಮ ಅವಕಾಶಗಳು ಒದಗಿ ಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನ ಮಾನದ ಯೋಗವಿದೆ. ಆದರೆ ಆರ್ಥಿಕವಾಗಿ ಹಣಕಾಸಿಗಾಗಿ ಪರದಾಡಬೇಕಾದೀತು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ.
 
ಧನು: ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಮನಸ್ತಾಪವಾಗದಂತೆ ಎಚ್ಚರವಹಿಸಿ. ಕೋರ್ಟು ಕಚೇರಿ ವ್ಯವಹಾರಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಕೌಟುಂಬಿಕವಾಗಿ ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆದರೆ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ.
 
ಮಕರ: ಋಣಾತ್ಮಕ ಆಲೋಚನೆಗಳಿಗೆ ಕಡಿವಾಣ ಹಾಕಿ. ವೃತ್ತಿರಂಗದಲ್ಲಿ ನಿಮ್ಮ ಕಾರ್ಯಕ್ಷಮತೆಯ ಸತ್ವ ಪರೀಕ್ಷೆ ನಡೆಯಲಿದೆ. ಹೊಸ ಸವಾಲುಗಳಿಗೆ ಸಿದ್ಧರಾಗಬೇಕಾಗುತ್ತದೆ. ಹಿರಿಯರಿಗೆ ಪುಣ್ಯ ಕ್ಷೇತ್ರಗಳ ಸಂದರ್ಶನ ಯೋಗವಿದೆ.
 
ಕುಂಭ: ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯವಿದೆ. ಸಂತಾನಾಪೇಕ್ಷಿತ ದಂಪತಿಗಳಿಗೆ ಶುಭ ಸೂಚನೆ ದೊರೆಯಲಿದೆ. ಮನೆಯಲ್ಲಿ ಬಂಧು ಮಿತ್ರರ ಆಗಮನದಿಂದ ಸಂತಸದ ವಾತಾವರಣವಿರಲಿದೆ. ನರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ.
 
ಮೀನ: ನೀವು ಬಹುದಿನಗಳಿಂದ ಕಾಪಾಡಿಕೊಂಡು ಬಂದಿದ್ದ ವಸ್ತು ಕೈತಪ್ಪಿ ಹೋಗಿ ಮನಸ್ಸಿಗೆ ಬೇಸರವಾದೀತು. ನಿಮ್ಮ ಗುಟ್ಟುಗಳನ್ನು ತಿಳಿಯಲು ಇತರರಿಗೆ ವಿಪರೀತ ಆಸಕ್ತಿಯಿರುತ್ತದೆ. ಎಚ್ಚರಿಕೆಯಿಂದ ವರ್ತಿಸಿ. ವ್ಯವಹಾರದಲ್ಲಿ ಮುನ್ನಡೆ ತೋರಿಬರಲಿದೆ.
ಇದರಲ್ಲಿ ಇನ್ನಷ್ಟು ಓದಿ :