Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 19 ಮಾರ್ಚ್ 2020 (09:26 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ದೈವಾನುಗ್ರಹದಿಂದ ನೀವು ಅಂದುಕೊಂಡಿದ್ದನ್ನು ಸಾಧಿಸುವಿರಿ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಆದರೆ ಅನಿರೀಕ್ಷಿತ ಖರ್ಚುಗಳು ಬರಬಹುದು. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಬೇರೆಯವರ ಮಾತಿನಿಂದ ಪ್ರಚೋದನೆಗೊಳಗಾಗಬೇಡಿ.
 
ವೃಷಭ: ಸಂಸಾರದಲ್ಲಿ ಸಾಮರಸ್ಯದ ಕೊರತೆ ಕಂಡುಬರಬಹುದು. ಮಾನಸಿಕ ಒತ್ತಡ ಕಂಡುಬರಲಿದೆ. ಕಾರ್ಯನಿಮಿತ್ತ ಅಧಿಕ ಓಡಾಟ ನಡೆಸಬೇಕಾಗುತ್ತದೆ. ಪ್ರೀತಿ ಪಾತ್ರರಿಗಾಗಿ ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ಆದರೆ ಪ್ರಯತ್ನಗಳಿಗೆ ತಕ್ಕ ಫಲ ಇದ್ದೇ ಇರುತ್ತದೆ.
 
ಮಿಥುನ: ವೃತ್ತಿರಂಗದಲ್ಲಿ ನಿಮ್ಮ ಲೆಕ್ಕಾಚಾರ ತಪ್ಪಿಹೋದಂತೆ ಅನಿಸಬಹುದು. ಪ್ರಯತ್ನಬಲದಿಂದಲೇ ಕಾರ್ಯ ಸಾಧನೆ ಮಾಡಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.
 
ಕರ್ಕಟಕ: ಕಾರ್ಯರಂಗದಲ್ಲಿ ನಿಮ್ಮ ಕೆಲಸ ಮುಗಿಸಬೇಕಾದರೆ ಕಠಿಣ ಪರಿಶ್ರಮಪಡಲೇಬೇಕು. ವಾದ ವಿವಾದಗಳಿಂದ ದೂರವಿರುವುದು ಉತ್ತಮ. ಹಿರಿಯರ ಬುದ್ಧಿ ಮಾತುಗಳು ಅಪಥ್ಯವೆನಿಸಬಹುದು. ಸಂಗಾತಿಗೆ ಉಡುಗೊರೆ ನೀಡಲಿದ್ದೀರಿ.
 
ಸಿಂಹ: ವಾಹನ, ಭೂಮಿ ಖರೀದಿಗೆ ಇದು ಸಕಾಲ. ಆರ್ಥಿಕವಾಗಿ ನಿಮ್ಮ ಲೆಕ್ಕಾಚಾರಗಳು ಸರಿಯಾಗಿ ಕೆಲಸ ಮಾಡಲಿವೆ. ಅವಿವಾಹಿತರಿಗೆ ಶೀಘ್ರ ವಿವಾಹ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಅದೃಷ್ಟಬಲವಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ.
 
ಕನ್ಯಾ: ಹಿರಿಯರ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸುವಿರಿ. ಆದರೆ ಪ್ರೀತಿ ಪಾತ್ರರಿಂದ ದೂರವಾಗುವ ಅಗಲುವಿಕೆಯ ನೋವು ಕಾಡಲಿದೆ. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಹಣಕಾಸಿನ ಹರಿವಿಗೆ ತೊಂದರಯಿರದು.
 
ತುಲಾ: ಬಂಧು ಮಿತ್ರರ ಸಹಕಾರದಿಂದ ನೀವು ಅಂದುಕೊಂಡ ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಪಾಲು ಬಂಡವಾಳ ಹೂಡಿಕೆ ವ್ಯವಹಾರ ಮಾಡುವವರಿಗೆ ಮುನ್ನಡೆಯಿರಲಿದೆ. ಮಹಿಳೆಯರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬರಬಹುದು. ಎಚ್ಚರಿಕೆ ಅಗತ್ಯ.
 
ವೃಶ್ಚಿಕ: ತಾಂತ್ರಿಕ ವೃತ್ತಿಯವರಿಗೆ ಮುನ್ನಡೆಯಿರಲಿದೆ. ವೈದ್ಯಕೀಯ ಶಿಕ್ಷಣ ಮಾಡುವವರಿಗೆ ಕಠಿಣ ಸವಾಲುಗಳು ಎದುರಾಗಲಿವೆ. ಆರ್ಥಿಕವಾಗಿ ಅಭಿವೃದ್ಧಿ ಗೋಚರಕ್ಕೆ ಬರಲಿದೆ. ಅವಿವಾಹಿತರು ಉತ್ತಮ ಸಂಬಂಧಕ್ಕೆ ಕೆಲವು ದಿನ ಕಾಯುವುದು ಒಳಿತು.
 
ಧನು: ಚಿಂತಿತ ಕಾರ್ಯಗಳು ನಿಧಾನಗತಿಯಲ್ಲಿ ನಡೆಯಲಿವೆ. ಮಾನಸಿಕವಾಗಿ ನಿರುತ್ಸಾಹ ಕಾಡಲಿದೆ. ಆದಾಯವಿದ್ದರೂ ಖರ್ಚು ವೆಚ್ಚದ ಬಗ್ಗೆ ಹಿಡಿತ ಅಗತ್ಯ. ಸಾಂಸಾರಿಕವಾಗಿ ಬಂಧು ಬಳಗದವರ ಪ್ರೀತಿಗೆ ಪಾತ್ರವಾಗಲಿದ್ದೀರಿ. ದಿನದಂತ್ಯಕ್ಕೆ ಶುಭ ಸುದ್ದಿ.
 
ಮಕರ: ದೈವಾನುಗ್ರಹದಿಂದ ನಿಮ್ಮ ಮನೋಭಿಲಾಷೆಗಳು ಪೂರ್ತಿಯಾಗಲಿವೆ. ವಾಹನ ಸಂಚಾರದಿಂದ ದೇಹಾಯಾಸವಾಗಬಹುದು. ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಕೌಟುಂಬಿಕವಾಗಿ ಸಂತಸದ ದಿನವಾಗಿರಲಿದೆ.
 
ಕುಂಭ: ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಒದಗಿ ಬರಲಿವೆ. ಸಾಂಸಾರಿಕವಾಗಿ ಸಂಗಾತಿಯ ಸಹಕಾರ ದೊರೆಯಲಿದೆ. ಹೊಸ ಯೋಜನೆಗಳಿಗೆ ಕೈ ಹಾಕುವಿರಿ. ದೇವಾಲಯ ಸಂದರ್ಶನ ಯೋಗವಿದೆ.
 
ಮೀನ: ಕೆಳ ಹಂತದ ನೌಕರ ವರ್ಗಕ್ಕೆ ಮುನ್ನಡೆಯ ಯೋಗವಿದೆ. ಗೃಹ ಸಂಬಂಧೀ ಕೆಲಸಗಳಿಗೆ ಕೈ ಹಾಕಿದರೆ ಅಡೆತಡೆಗಳು ಗ್ಯಾರಂಟಿ. ದೇಹಾರೋಗ್ಯದ ಬಗ್ಗೆ ಗಮನಕೊಡುವುದು ಅಗತ್ಯ. ಮಹಿಳೆಯರು ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.
ಇದರಲ್ಲಿ ಇನ್ನಷ್ಟು ಓದಿ :