Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 21 ಮಾರ್ಚ್ 2020 (08:54 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆಗೆ ಅವಕಾಶಗಳು ಸಿಗಲಿವೆ. ಆದರೆ ಸಂಗಾತಿಯ ಮೇಲೆ ವಿನಾಕಾರಣ ಗೂಬೆ ಕೂರಿಸಿ ಮನಸ್ತಾಪ ಮಾಡಿಕೊಳ್ಳಬೇಡಿ. ಅನಗತ್ಯ ಚಿಂತೆಗಳಿಗೆ ಕಡಿವಾಣ ಹಾಕಿ. ಆರ್ಥಿಕವಾಗಿ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.
 
ವೃಷಭ: ಮನಸ್ಸು ಹುಚ್ಚು ಕುದುರೆಯಂತೆ ಇಲ್ಲದಕ್ಕೆಲ್ಲಾ ಆಸೆ ಪಡುತ್ತಿರುತ್ತದೆ. ಕಡಿವಾಣ ಹಾಕುವುದು ಉತ್ತಮ. ಮಹಿಳೆಯರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ವ್ಯವಹಾರದಲ್ಲಿ ಮುನ್ನಡೆ ಸಾಧಿಸಬೇಕಾದರೆ ಕಠಿಣ ಪರಿಶ್ರಮ ಅಗತ್ಯ.
 
ಮಿಥುನ: ಎಲ್ಲವನ್ನೂ ವಿಮರ್ಶಿಸುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗದು. ದುಡುಕು ಮಾತು, ವರ್ತನೆಗೆ ಕಡಿವಾಣ ಹಾಕುವುದು ಉತ್ತಮ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಅವಿವಾಹಿತರು ವಿವಾಹ ಪ್ರಸ್ತಾಪಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು.
 
ಕರ್ಕಟಕ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಮನೆಯಲ್ಲಿ ಕಳ್ಳತನದ ಭೀತಿಯಿದ್ದು, ಎಚ್ಚರಿಕೆಯಿಂದಿರಿ. ಸಂಗಾತಿಯ ಮಾತಿಗೆ ಕಿವಿಗೊಡಬೇಕಾಗುತ್ತದೆ. ನೂತನ ದಂಪತಿಗಳಿಗೆ ಮಧು ಚಂದ್ರದ ಭಾಗ್ಯವಿದೆ.
 
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆ ಪ್ರಕಟಿಸಲು ವೇದಿಕೆ ಸಿಗಲಿದೆ. ನಿಮ್ಮ ಬುದ್ಧಿಮತ್ತೆಯಿಂದಲೇ ಸಂಭಾವ್ಯ ಸಮಸ್ಯೆಗಳನ್ನು ಎದುರಿಸುವಿರಿ. ದಾಯಾದಿ ಕಲಹಗಳು ಪರಿಹಾರವಾಗಲಿದೆ. ಆಸ್ತಿ ಖರೀದಿಗೆ ಮುಂದಾಗಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕನ್ಯಾ: ಸಂಗಾತಿಯ ಬಹುದಿನಗಳ ಬೇಡಿಕೆ ಪೂರೈಸಲು ಧನವ್ಯಯ ಮಾಡಲಿದ್ದೀರಿ. ಕೌಟುಂಬಿಕವಾಗಿ ಸಂತಸಕ್ಕೆ ಕೊರತೆಯಿರದು. ಮಕ್ಕಳ ಭವಿಷ್ಯಕ್ಕೆ ಯೋಜನೆ ರೂಪಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು.
 
ತುಲಾ: ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚಲಿದೆ. ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹಿರಿಯರಿಗೆ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗದೇ ನಿರಾಸೆಯಾಗಬಹುದು. ತಾಳ್ಮೆ ಕಳೆದುಕೊಳ್ಳಬೇಡಿ.
 
ವೃಶ್ಚಿಕ: ಹೆಚ್ಚಿನ ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳುವಿರಿ. ಹೊಸ ಯೋಜನೆಗೆ ಕೈಹಾಕುವ ಮುನ್ನ ಹಲವು ಬಾರಿ ಯೋಚಿಸಿ ಮುನ್ನಡೆಯಿರಿ. ಬಹುದಿನಗಳಿಂದ ಆಸೆ ಪಡುತ್ತಿದ್ದ ವಸ್ತು ನಿಮ್ಮ ಕೈ ಸೇರಲಿದೆ. ಪ್ರೀತಿ ಪಾತ್ರರೊಂದಿಗೆ ಸಂತೋಷದಕ ಕ್ಷಣ ಕಳೆಯಲಿದ್ದೀರಿ.
 
ಧನು: ಅನಗತ್ಯವಾಗಿ ಇನ್ನೊಬ್ಬರ ವಿಚಾರದಲ್ಲಿ ತಲೆಕೆಡಿಸಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಂಡುಬರಲಿದೆ. ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ಸರಕಾರಿ ಉದ್ಯೋಗಿಗಳಿಗೆ ಮುನ್ನಡೆ ಸಿಗಲಿದೆ.
 
ಮಕರ: ಇನ್ನೊಬ್ಬರಿಗೆ ಬುದ್ಧಿ ಮಾತು ಹೇಳುವ ನೀವು ಇಂದು ನೀವಾಗಿಯೇ ತಪ್ಪು ಹೆಜ್ಜೆ ಇಡಲಿದ್ದೀರಿ. ವ್ಯವಹಾರದಲ್ಲಿ ಅಪರಿಚಿತರಿಂದ ವಂಚನೆಗೊಳಗಾಗುವ ಭೀತಿಯಿದೆ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯಿದೆ. ಆದರೆ ದೇಹಾರೋಗ್ಯ ಕ್ಷೀಣಿಸಬಹುದು.
 
ಕುಂಭ: ಬಹುದಿನಗಳ ಕನಸು ನನಸು ಮಾಡಿಕೊಳ್ಳಲಿದ್ದೀರಿ. ವ್ಯವಹಾರದಲ್ಲಿ ಮುನ್ನಡೆಯಿರಲಿದ್ದು, ಆರ್ಥಿಕ ಲಾಭ ಪಡೆಯಬಹುದು. ಹೆಚ್ಚು ನಿರೀಕ್ಷೆ ಇಟ್ಟುಕೊಂಡವರಿಂದ ನಿರಾಸೆಯೇ ಸಿಗಲಿದೆ. ಮಾನಸಿಕವಾಗಿ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು.
 
ಮೀನ: ವೃತ್ತಿರಂಗದಲ್ಲಿ, ಕಾರ್ಯಕ್ಷೇತ್ರದಲ್ಲಿ ಒಂದು ರೀತಿಯ ನಿರುತ್ಸಾಹ ಕಂಡುಬರಲಿದೆ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ಕೆಳಹಂತದ ನೌಕರರಿಗೆ ಬಡ್ತಿ ಯೋಗವಿದೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರುವುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :