Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 22 ಮಾರ್ಚ್ 2020 (09:09 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ಆದರೆ ಉತ್ತಮ ಸಂಬಂಧಗಳನ್ನು ಯೋಚಿಸಿ ಆಯ್ಕೆ ಮಾಡಬೇಕಾಗುತ್ತದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಆದರೂ ಬಾಕಿ ಹಣ ವಸೂಲಾತಿ ಚಿಂತೆ ಕಾಡಲಿದೆ. ಅನಗತ್ಯ ಚಿಂತೆ ಬೇಡ.
 
ವೃಷಭ: ನಿರುದ್ಯೋಗಿಗಳು ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಮನೆಯಲ್ಲಿ ಸಮಾಧಾನಕರ ವಾತಾವರಣವಿರುವುದು. ಕ್ರಿಯಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಕಾರ್ಯನಿಮಿತ್ತ ದೂರ ಸಂಚಾರ ಮಾಡುವಾಗ ಎಚ್ಚರಿಕೆ ಅಗತ್ಯ.
 
ಮಿಥುನ: ಯಾವುದೇ ವಿಚಾರದಲ್ಲೂ ಅನಗತ್ಯ ಚಿಂತೆ ಬೇಡ. ಆದರೆ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ವಾಹನ ಚಾಲನೆ ವೃತ್ತಿಯಲ್ಲಿರುವವರಿಗೆ ಅಪಘಾತದ ಭಯ. ಎಚ್ಚರಿಕೆ ಅಗತ್ಯ.
 
ಕರ್ಕಟಕ: ವೃತ್ತಿರಂಗದಲ್ಲಿ ಬದಲಾವಣೆಗೆ ಮನಸ್ಸು ಹಾತೊರೆಯುತ್ತದೆ. ಆದರೆ ಸೂಕ್ತ ಅವಕಾಶ ಸಿಗದೇ ನಿರಾಸೆಯಾಗುವುದು. ಕೃಷಿಕರಿಗೆ ಕಠಿಣ ಪರಿಶ್ರಮ ಅಗತ್ಯ. ಹೂಡಿಕೆ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಕೆಲವು ದಿನ ಕಾಯುವುದು ಉತ್ತಮ.
 
ಸಿಂಹ: ಯಾವುದೇ ವಿಚಾರದಲ್ಲಿ ನಿರ್ಧಾರ ಮಾಡುವ ಮೊದಲು ಹಿರಿಯರ ಅಭಿಪ್ರಾಯಗಳಿಗೆ ಕಿವಿಗೊಡಿ. ಸಂಗಾತಿಯಿಂದ ಬಂದ ಉಡುಗೊರೆಯನ್ನು ಕಳೆದುಕೊಳ್ಳುವ ಅಪಾಯವಿದೆ. ಮಾತನಾಡುವ ಮೊದಲು ಯೋಚಿಸಿದರೆ ಉತ್ತಮ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕನ್ಯಾ: ಯಾವುದೇ ಕೆಲಸ ಕಾರ್ಯಗಳನ್ನು ಮಾಡುವ ಮೊದಲು ಕುಲದೇವರ ಪ್ರಾರ್ಥನೆ ನಡೆಸಿ ಮುಂದುವರಿಯುವುದು ಉತ್ತಮ. ವೃತ್ತಿರಂಗದಲ್ಲಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಿ. ವ್ಯವಹಾರ ಕ್ಷೇತ್ರದಲ್ಲಿ ಮುನ್ನಡೆಯಿರಲಿದೆ. ಕೌಟುಂಬಿಕವಾಗಿ ಸಂತಸದ ದಿನ.
 
ತುಲಾ: ಆರ್ಥಿಕವಾಗಿ ಸಕಾಲದಲ್ಲಿ ಧನಾಗಮನವಾಗಲಿರುವುದರಿಂದ ಅಂದುಕೊಂಡ ಕೆಲಸಗಳನ್ನು ನೆರವೇರಿಸುವಿರಿ. ವೃತ್ತಿರಂಗದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಬೆಲೆ ಸಿಗದೇ ನಿರಾಸೆಯಾಗಬಹುದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
 
ವೃಶ್ಚಿಕ: ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ಕರೆ ಬಾರದೇ ಬೇಸರವಾಗಬಹುದು. ಸ್ವ ವೃತ್ತಿಯವರಿಗೆ ಮುನ್ನಡೆಯಿರಲಿದೆ. ಅವಿವಾಹಿತರಿಗೆ ಶೀಘ್ರ ವಿವಾಹ ನಿಶ್ಚಯವಾಗಲಿದೆ. ಮನೆಗೆ ಅನಿರೀಕ್ಷಿತವಾಗಿ ಅತಿಥಿಯ ಆಗಮನವಾಗಲಿದೆ.
 
ಧನು: ನೀವು ನಂಬಿಕೊಂಡಿದ್ದವರ ಬಗ್ಗೆ ಸತ್ಯದರ್ಶನವಾಗಲಿದೆ. ಅನಗತ್ಯವಾಗಿ ನಿಮ್ಮ ಗುಟ್ಟುಗಳನ್ನು ಬೇರೆಯವರ ಎದುರು ಬಿಟ್ಟುಕೊಡಬೇಡಿ. ಸಾಂಸಾರಿಕವಾಗಿ ಹೊಂದಾಣಿಕೆಯ ಮನೋಭಾವವಿದ್ದರೆ ಸಮಾಧಾನವಿರುವುದು. ಕಿರು ಸಂಚಾರ ಮಾಡಬೇಕಾಗುತ್ತದೆ.
 
ಮಕರ: ಯಾವುದೇ ಕೆಲಸಕ್ಕೂ ನಿಮ್ಮ ಪ್ರಯತ್ನಬಲವೇ ಮುಖ್ಯವಾಗಲಿದೆ. ವೃತ್ತಿರಂಗದಲ್ಲಿ ಬದಲಾವಣೆ ಮನಸ್ಸಿಗೆ ನೆಮ್ಮದಿ ಕೊಡಲಿದೆ. ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಪ್ರಯತ್ನಿಸಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ.
 
ಕುಂಭ: ಮಾನಸಿಕವಾಗಿ ಋಣಾತ್ಮಕ ಚಿಂತೆಗಳು ಕಾಡಲಿವೆ. ಕಾರ್ಯಕ್ಷೇತ್ರದಲ್ಲಿ ಅಧಿಕ ಓಡಾಟದಿಂದ ದೇಹಾಯಾಸವಾಗಬಹುದು. ಸಂಗಾತಿಯನ್ನು ಸಂಪ್ರೀತಿಗೊಳಿಸಲು ಹೊಸ ವಸ್ತುಗಳ ಖರೀದಿ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮೀನ: ಆದಾಯಕ್ಕಿಂತ ಖರ್ಚೇ ಹೆಚ್ಚಾಗಿ ಚಿಂತೆಯಾಗಲಿದೆ. ಹಳೆ ವೈಷಮ್ಯ ಮರೆತು ದಾಯಾದಿಗಳೊಂದಿಗೆ ಸ್ನೇಹ ಸಂಬಂಧ ಕಾಯ್ದುಕೊಳ್ಳಲು ಮುಂದಾಗುವಿರಿ. ದುಶ್ಚಟಗಳತ್ತ ಗಮನ ಹರಿಯದಂತೆ ಸಂಯಮವಿರಲಿ. ಮೇಲಧಿಕಾರಿಗಳ ವಿಶ್ವಾಸ ಸಂಪಾದಿಸಲಿದ್ದೀರಿ.
ಇದರಲ್ಲಿ ಇನ್ನಷ್ಟು ಓದಿ :