Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 23 ಮಾರ್ಚ್ 2020 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ವಾತಾವರಣವಿರಲಿದೆ. ಆದರೆ ಸಾಂಸಾರಿಕವಾಗಿ ಅನಗತ್ಯ ವಾದ ವಿವಾದಗಳಿಗೆ ಅವಕಾಶ ಕೊಡಬೇಡಿ. ಸಂಯಮ ಕಾಪಾಡಿಕೊಳ್ಳಬೇಕಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.
 
ವೃಷಭ: ವೃತ್ತಿರಂಗದಲ್ಲಿ ಅಧಿಕ ಕಾರ್ಯದೊತ್ತಡವರಲಿದ್ದು, ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಬೇಕಿದೆ. ಹೊಸ ಯೋಜನೆಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಒಳಿತು. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ.
 
ಮಿಥುನ: ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಚಿಂತಿತ ಕಾರ್ಯಗಳನ್ನು ಜಾರಿಗೆ ತರಲು ಕೆಲವು ಅಡೆತಡೆಗಳು ತೋರಿಬರಲಿವೆ.  ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಮನಸ್ಸಿನ ನೆಮ್ಮದಿಗಾಗಿ ದೇವತಾ ಪ್ರಾರ್ಥನೆ ಮಾಡಿ.
 
ಕರ್ಕಟಕ: ಕಾರ್ಯಕ್ಷೇತ್ರದಲ್ಲಿ ಬರುವ ವಿಘ್ನಗಳನ್ನು ನಿವಾರಿಸಲು ಕುಲದೇವರ ಪ್ರಾರ್ಥನೆ ಮಾಡಿ ಮುನ್ನಡೆಯಿರಿ. ಸಂಗಾತಿಯ ಸಹಕಾರ ಸಿಗಲಿದೆ. ಇಷ್ಟ ಭೋಜನ ಮಾಡುವ ಯೋಗವಿದೆ. ಆಕಸ್ಮಿಕವಾಗಿ ಧನಲಾಭವಾಗಲಿದೆ. ದುಂದುವೆಚ್ಚಗಳಿಗೆ ಕಡಿವಾಣ ಹಾಕಬೇಕು.
 
ಸಿಂಹ: ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಲು ವಿಘ್ನಗಳು ಎದುರಾಗಲಿವೆ. ವಾಹನ ಸವಾರರಿಗೆ ಆಕಸ್ಮಿಕ ಧನಲಾಭ ಭಾಗ್ಯವಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಬರುವ ಸವಾಲುಗಳಿಗೆ ನಿಮ್ಮ ಕ್ರಿಯಾಶೀಲತೆಯಿಂದ ಪರಿಹಾರ ಕಂಡುಕೊಳ್ಳುವಿರಿ. ಇಷ್ಟ ಮಿತ್ರರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಸರಕಾರಿ ಉದ್ಯೋಗಿಗಳಿಗೆ ಮುನ್ನಡೆಯ ಯೋಗವಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ತುಲಾ: ಸ್ವಯಂ ವೃತ್ತಿಯವರಿಗೆ ವ್ಯವಹಾರದಲ್ಲಿ ಅಧಿಕ ಧನಲಾಭ ತರುವ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಭೂಮಿ, ಮನೆ ಖರೀದಿಗೆ ಇದು ಸಕಾಲ. ಗೃಹೋಪಯೋಗಿ ವಸ್ತುಗಳಿಗೆ ಹೆಚ್ಚಿನ ಧನವ್ಯಯ ಮಾಡಲಿದ್ದೀರಿ. ಸಂಗಾತಿಗೆ ಉಡುಗೊರೆ ನೀಡಲಿದ್ದೀರಿ.
 
ವೃಶ್ಚಿಕ: ನಿಮ್ಮ ಕೆಲವೊಂದು ನಿರ್ಧಾರಗಳು ಪ್ರೀತಿ ಪಾತ್ರರಿಗೆ ಹಿಡಿಸದೇ ಹೋಗಬಹದು. ವ್ಯಾಪಾರಿಗಳಿಗೆ ಆರ್ಥಿಕವಾಗಿ ಹಿನ್ನಡೆಯಾಗಲಿದೆ. ಹಿತಶತ್ರುಗಳ ಬಗ್ಗೆ ಎಚ್ಚರವಾಗಿರಬೇಕು. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ.
 
ಧನು: ಅನಿರೀಕ್ಷಿತವಾಗಿ ಮನೆಗೆ ನೆಂಟರಿಷ್ಟರ ಆಗಮನವಾಗಲಿದ್ದು, ನಿಮ್ಮ ಮೇಲೆ ಹೆಚ್ಚಿನ ಕಾರ್ಯದೊತ್ತಡ ಬೀಳಲಿದೆ. ಮಕ್ಕಳ ವಿಚಾರದಲ್ಲಿ ಅನಗತ್ಯ ಚಿಂತೆ ಮಾಡಬೇಡಿ. ಅವಿವಾಹಿತರು ಉತ್ತಮ ಸಂಬಂಧಕ್ಕಾಗಿ ಕೆಲವು ದಿನ ಕಾಯುವುದು ಒಳಿತು.
 
ಮಕರ: ಎಂದೋ ಅಂದುಕೊಂಡಿದ್ದ ಕೆಲಸ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ. ದೈವಾನುಗ್ರಹದಿಂದ ನಿಮ್ಮ ಕೆಲಸಗಳಲ್ಲಿ ಇಂದು ಯಶಸ್ಸು ಕಾಣುವಿರಿ. ನೂತನ ದಂಪತಿಗಳಿಗೆ ಮಧುಚಂದ್ರ ಭಾಗ್ಯ. ಹಿರಿಯರಿಗೆ ದೇವಾಲಯ ಸಂದರ್ಶನ ಯೋಗವಿದೆ.
 
ಕುಂಭ: ಅಧಿಕ ಧನಾರ್ಜನೆ ಮಾಡುವ ದುರಾಲೋಚನೆಯಿಂದ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ. ಮಾನಸಿಕವಾಗಿ ಋಣಾತ್ಮಕ ಚಿಂತನೆಗಳಿಗೆ ಕಡಿವಾಣ ಹಾಕುವುದು ಅಗತ್ಯ. ದೈನಂದಿನ ಕೆಲಸಗಳಲ್ಲಿ ನಿರುತ್ಸಾಹ ಕಾಡಲಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು.
 
ಮೀನ: ವೃತ್ತಿರಂಗದಲ್ಲಿ ಹೆಚ್ಚಿನ ಕಾರ್ಯಲಾಭಕ್ಕೆ ಮಿತ್ರರ ಸಹಕಾರ ದೊರೆಯಲಿದೆ. ಯಂತ್ರೋಪಕರಣಗಳ ಕೆಲಸ ಮಾಡುವವರಿಗೆ ಮುನ್ನಡೆ. ಕೃಷಿಕರಿಗೆ ವ್ಯವಹಾರದಲ್ಲಿ ಲಾಭವಿಲ್ಲದಿದ್ದರೂ ನಷ್ಟವಾಗದು. ಕಿರು ಸಂಚಾರ ಮಾಡಬೇಕಾಗುತ್ತದೆ.
ಇದರಲ್ಲಿ ಇನ್ನಷ್ಟು ಓದಿ :