Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 26 ಮಾರ್ಚ್ 2020 (09:10 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಸಂಬಂಧವಾಗಿ ಹೊಸ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಕಾರ್ಯಕ್ಷೇತ್ರದಲ್ಲಿ ಅಂದುಕೊಂಡ ಕೆಲಸಗಳಿಗೆ ಅಡೆತಡೆಗಳು ತೋರಿಬರಲಿವೆ. ಆತ್ಮವಿಶ್ವಾಸದಿಂದ ನಿಭಾಯಿಸಿ. ಆರೋಗ್ಯದ ಬಗ್ಗೆ ಚಿಂತೆಯಾಗಲಿದೆ.
 
ವೃಷಭ: ದೈವಾನುಕೂಲದಿಂದ ಇಂದು ನೀವು ಅಂದುಕೊಂಡ ಕೆಲಸಗಳು ನೆರವೇರಲಿದೆ. ವೃತ್ತಿರಂಗದಲ್ಲಿ ಮುನ್ನಡೆಯಿರಲಿದೆ. ವ್ಯಾಪಾರಿಗಳಿಗೆ ಲಾಭವಿಲ್ಲದಿದ್ದರೂ ನಷ್ಟವಾಗದು. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ದೇವತಾ ಪ್ರಾರ್ಥನೆ ಮಾಡಿ.
 
ಮಿಥುನ: ಎಲ್ಲಾ ಇದ್ದರೂ ಅನುಭವಿಸಲಾಗದ ಸ್ಥಿತಿ ಎದುರಾಗಲಿದೆ. ಇನ್ನೊಬ್ಬರಿಗೆ ಸಹಾಯ ಮಾಡಬೇಕೆನಿಸದರೂ ಅಸಹಾಯಕತೆ ಕಾಡಲಿದೆ. ಧಾರ್ಮಿಕವಾಗಿ ಭಕ್ತಿ ಭಾವ ಹೆಚ್ಚಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.
 
ಕರ್ಕಟಕ: ಸ್ವಯಂ ವೃತ್ತಿಯವರಿಗೆ ಮುನ್ನಡೆಯಿರಲಿದೆ. ವೃತ್ತಿರಂಗದಲ್ಲಿ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಮಿತ್ರರ ಸಹಕಾರ ಪಡೆಯುವಿರಿ. ಕೌಟುಂಬಿಕವಾಗಿ ಹೆಚ್ಚುವರಿ ಹೊಣೆಗಾರಿಕೆ ಬೀಳಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
 
ಸಿಂಹ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸ್ಥಾನ ಮಾನ ವೃದ್ಧಿಯಾಗಲಿದೆ. ಸಾಮಾಜಿಕವಾಗಿ ನಿಮ್ಮೆ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ. ಸಂಗಾತಿಯ ಪ್ರೀತಿಗೆ ಪಾತ್ರರಾಗಲಿದ್ದೀರಿ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇಷ್ಟದೇವರ ಪ್ರಾರ್ಥನೆ ಮಾಡಿ.
 
ಕನ್ಯಾ: ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಾಲ ಕಳೆಯಲಿದ್ದೀರಿ. ಸಂಗಾತಿಯ ಸಲಹೆಗೆ ಕಿವಿಗೊಡಬೇಕಾಗುತ್ತದೆ. ಗೃಹ ಬಳಕೆ ವಸ್ತುಗಳ ಖರೀದಿಗಾಗಿ ಧನವ್ಯಯ ಮಾಡಲಿದ್ದೀರಿ. ನಿರುದ್ಯೋಗಿಗಳು ಸ್ವ ಉದ್ಯೋಗದ ಬಗ್ಗೆ ಚಿಂತನೆ ನಡೆಸಲಿದ್ದಾರೆ.
 
ತುಲಾ: ನೀವು ಬಹುದಿನಗಳಿಂದ ನೆನೆಸಿಕೊಳ್ಳುತ್ತಿದ್ದ ಮಿತ್ರನ ಭೇಟಿ ಮನಸ್ಸಿಗೆ ಸಂತಸ ನೀಡಲಿದೆ. ಕಾರ್ಯಕ್ಷೇತ್ರದಲ್ಲಿ ಅಡಚಣೆಗಳು ತೋರಿಬಂದೀತು. ಕೆಲವು ದಿನ ತಾಳ್ಮೆಯಿಂದ ಕಾಯುವುದು ಒಳಿತು. ದೇಹಾರೋಗ್ಯದಲ್ಲಿ ಏರುಪೇರಾದೀತು. ಎಚ್ಚರ.
 
ವೃಶ್ಚಿಕ: ಸಹೋದರರೊಂದಿಗೆ ಆಸ್ತಿ ವಿಚಾರವಾಗಿ ಕಿರಿ ಕಿರಿಯಾದೀತು. ನಿಮ್ಮ ಕೆಲವೊಂದು ನಿರ್ಧಾರಗಳು ಸಂಗಾತಿಯ ಅಸಮಾಧಾನಕ್ಕೆ ಕಾರಣವಾದೀತು. ನೆರೆಹೊರೆಯವರ ಚಾಡಿ ಮಾತುಗಳನ್ನು ಅಲಕ್ಷಿಸುವುದು ಒಳಿತು. ಕುಲದೇವರ ಪ್ರಾರ್ಥನೆ ಮಾಡಿ.
 
ಧನು: ನಿಮ್ಮ ಉತ್ತಮ ನಡುವಳಿಕೆಯಿಂದ ಜನರ ಪ್ರೀತಿಗೆ ಪಾತ್ರರಾಗಲಿದ್ದೀರಿ. ಮಹಿಳೆಯರಿಗೆ ಚಿನ್ನಾಭರಣ ಕಳೆದುಕೊಳ್ಳುವ ಭೀತಿ ಎದುರಾಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನ ಪ್ರವೃತ್ತಿ ಕಂಡುಬರಲಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು.
 
ಮಕರ: ನೂತನ ದಂಪತಿಗಳಲ್ಲಿ ಹೊಂದಾಣಿಕೆಯ ಕೊರತೆ ಕಾಣಬಹುದು. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ. ಪ್ರೇಮಿಗಳ ಗುಟ್ಟು ಮನೆಯವರ ಎದುರು ಬಹಿರಂಗವಾಗಲಿದೆ. ಆರ್ಥಿಕವಾಗಿ ಆದಾಯಕ್ಕೆ ಕೊರತೆಯಿರದು. ಖರ್ಚಿನ ಬಗ್ಗೆ ನಿಗಾ ಇರಲಿ.
 
ಕುಂಭ: ಯಾವುದೋ ಹಳೆಯ ಯೋಚನೆಗಳಿಂದ ಮಾನಸಿಕವಾಗಿ ಬೇಸರವಾಗಬಹುದು. ಕೆಲಸ ಕಾರ್ಯಗಳಲ್ಲಿ ಚುರುಕುತನ ತೋರಿಸಬೇಕಾಗುತ್ತದೆ. ವಿವಾಹ ಪ್ರಯತ್ನಗಳು ಸ್ವಲ್ಪದರಲ್ಲೇ ಕೈತಪ್ಪಿ ಹೋಗಲಿವೆ. ವಿದ್ಯಾರ್ಥಿಗಳು ಪರಿಶ್ರಮಕ್ಕೆ ತಕ್ಕ ಫಲ ಪಡೆಯಲಿದ್ದಾರೆ.
 
ಮೀನ: ನಿರುದ್ಯೋಗಿಗಳು ಬಹುದಿನಗಳ ಕನಸು ನನಸು ಮಾಡಿಕೊಳ್ಳಲಿದ್ದಾರೆ. ದೂರ ಸಂಚಾರಕ್ಕೆ ಅಡೆತಡೆಗಳು ತೋರಿಬರಲಿವೆ. ಸರಕಾರಿ ನೌಕರರಿಗೆ ಆರಾಮದಾಯಕ ದಿನಗಳು. ವಾತ ಸಂಬಂಧೀ ಆರೋಗ್ಯ ಸಮಸ್ಯೆ ಬಗ್ಗೆ ಎಚ್ಚರಿಕೆ ವಹಿಸಿ.
ಇದರಲ್ಲಿ ಇನ್ನಷ್ಟು ಓದಿ :