Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 29 ಮಾರ್ಚ್ 2020 (08:58 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಬಿಡುವಿದ್ದರೂ ಗೃಹಕೃತ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಆರ್ಥಿಕವಾಗಿ ಸಂಪಾದನೆಯ ಚಿಂತೆಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ವೃಷಭ: ಹಿರಿಯರಿಂದ ಬಂದ ಆಸ್ತಿ ಕಳೆದುಕೊಳ್ಳುವ ಭಯ ಕಾಡಲಿದೆ. ಕೋರ್ಟು ಕಚೇರಿ ವ್ಯವಹಾರಗಳನ್ನು ಮುಂದೂಡುವುದು ಉತ್ತಮ. ವ್ಯವಹಾರದಲ್ಲಿ ಅಂದುಕೊಂಡ ಕೆಲಸ ಕಾರ್ಯ ನೆರವೇರಿಸಲು ಅಡ್ಡಿಗಳು ಎದುರಾಗಲಿವೆ. ತಾಳ್ಮೆ ಅಗತ್ಯ.
 
ಮಿಥುನ: ಹಣಕ್ಕಿಂತ ಮನಶ್ಶಾಂತಿ ಮುಖ್ಯ ಎನ್ನುವುದನ್ನು ಅರಿಯಲಿದ್ದೀರಿ. ಪ್ರೀತಿ ಪಾತ್ರರೊಂದಿಗೆ ಅಮೂಲ್ಯ ಸಯಮ ಕಳೆಯಲಿದ್ದೀರಿ. ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಮುನ್ನಡೆ ಸಿಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ದತೆ ನಡೆಸಲಿದ್ದೀರಿ.
 
ಕರ್ಕಟಕ: ಮನದೆನ್ನೆಯ ಇಷ್ಟಾರ್ಥ ಪೂರೈಸಲು ಹಣ ಖರ್ಚು ಮಾಡಬೇಕಾಗಿ ಬರುತ್ತದೆ. ಮಹಿಳೆಯರಿಗೆ ಚಿನ್ನಾಭರಣಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗುವುದು. ಮಾನಸಿಕವಾಗಿ ಗಟ್ಟಿಯಾಗಬೇಕಾದ ಸಮಯವಿದು. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
 
ಸಿಂಹ: ವಿಷಮ ಸನ್ನಿವೇಶ ಎದುರಿಸಲು ಸಿದ್ಧರಾಗಬೇಕಾಗುತ್ತದೆ. ಕ್ರಿಯಾತ್ಮಕ ಬುದ್ಧಿಶಕ್ತಿಯಿಂದ ಸವಾಲುಗಳನ್ನು ಎದುರಿಸುವಿರಿ. ಮನೆಯ ಕಿರಿಯ ಸದಸ್ಯರ ಕಷ್ಟಗಳಿಗೆ ನೆರವಾಗುವಿರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ.
 
ಕನ್ಯಾ: ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಾಗಲಿದೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಹಿರಿಯರ ಮಧ್ಯಸ್ಥಿಕೆಯಿಂದ ಕುಟುಂಬ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ದೂರವಾಗಲಿದೆ. ದೂರ ಸಂಚಾರವನ್ನು ಮುಂದೂಡಿದರೆ ಉತ್ತಮ.
 
ತುಲಾ: ಅಧಿಕ ಧನಲಾಭ ಮಾಡುವ ದುರಾಲೋಚನೆಯಿಂದ ತಪ್ಪು ಮಾರ್ಗಗಳ ಬಗ್ಗೆ ಮನಸ್ಸು ವಾಲುವುದು. ಸಂಯಮ ಕಳೆದುಕೊಳ್ಳದಿರಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ದೊರೆಯಲಿದೆ. ಸಾಧು ಸಂತರ ಭೇಟಿಯಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.
 
ವೃಶ್ಚಿಕ: ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗದೇ ನಿರಾಸೆಯಾಗಬಹುದು. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದಿದ್ದರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಾಡಲಿದೆ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಯ ಕೊರತೆ ಕಾಡಲಿದೆ.
 
ಧನು: ಉದ್ಯೋಗ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ನೆರೆಹೊರೆಯವರು ನಿಮ್ಮ ಗುಟ್ಟುಗಳನ್ನು ಹೊರಗೆಳೆಯಲು ಕಾಯುತ್ತಿರುತ್ತಾರೆ. ಎಚ್ಚರಿಕೆಯಿಂದ ವರ್ತಿಸಿ. ಸಂಗಾತಿಯ ಮಾತಿಗೆ ಕಿವಿಗೊಡಿ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
 
ಮಕರ: ನೂತನ ದಂಪತಿಗಳು ಸುಮಧುರ ಕ್ಷಣ ಕಳೆಯುವರು. ದಾಂಪತ್ಯ ಸುಖಕ್ಕೆ ಕೊರತೆಯಿರದು. ಆದರೆ ಅಂದುಕೊಂಡ ಕೆಲಸಗಳಿಗೆ ಹಣಕಾಸಿನ ಅಡಚಣೆ ಕಂಡುಬರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನಕರ ದಿನ. ಕುಲದೇವರ ಪ್ರಾರ್ಥನೆ ಮಾಡಿ.
 
ಕುಂಭ: ನಿಮ್ಮ ಬಗ್ಗೆ ನೀವೇ ಕಾಳಜಿವಹಿಸಬೇಕಾದ ಸಮಯವಿದು. ಅನ್ಯರ ಚಾಡಿ ಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಸಂಗಾತಿಯ ದೇಹಾರೋಗ್ಯದಲ್ಲಿ ಏರುಪೇರಾಗಬಹುದು, ಎಚ್ಚರಿಕೆ. ವಾಹನ ಸವಾರರಿಗೆ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
 
ಮೀನ: ಅವಿವಾಹಿತರಿಗೆ ಬಯಸಿದ ಸಂಬಂಧ ಸಿಗದೇ ನಿರಾಸೆಯಾಗಬಹುದು. ಪ್ರೇಮಿಗಳಿಗೆ ಶುಭ ದಿನ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಅನುಭವಕ್ಕೆ ಬರಲಿದೆ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಕೆಲವು ದಿನ ಕಾಯುವುದು ಉತ್ತಮ.
ಇದರಲ್ಲಿ ಇನ್ನಷ್ಟು ಓದಿ :