Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಮಂಗಳವಾರ, 31 ಮಾರ್ಚ್ 2020 (09:17 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಕಾರ್ಯಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸದಿಂದಾಗಿ ತಾಳ್ಮೆ ಕಳೆದುಕೊಳ್ಳುವ ಸಂದರ್ಭ ಎದುರಾಗಲಿದೆ. ಸಂಯಮದಿಂದ ವರ್ತಿಸಿ. ಕೋಪದ ಕೈಗೆ ಬುದ್ಧಿ ಕೊಟ್ಟರೆ ಸಂಬಂಧ ಹಾಳಾದೀತು. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆಯಿರಲಿದೆ. ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ.
 
ವೃಷಭ: ವ್ಯವಹಾರದಲ್ಲಿ ಅಪರಿಚಿತರಿಂದ ಅಡ್ಡಿ ಆತಂಕಗಳು ಎದುರಾಗಲಿವೆ. ಪಾಲು ಬಂಡವಾಳ ಹೂಡಿಕೆಯಲ್ಲಿ ಎಚ್ಚರವಾಗಿರಿ. ಮನೆ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಚಿಂತೆ ಬೇಡ.
 
ಮಿಥುನ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗದೇ ನಿರಾಸೆ ಕಾಡಲಿದೆ. ಸಂಗಾತಿಯ ಸಲಹೆಗೆ ಕಿವಿಗೊಡಬೇಕಾಗುತ್ತದೆ. ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.
 
ಕರ್ಕಟಕ: ನಿಮ್ಮ ಪ್ರೀತಿ ಪಾತ್ರರ ಅಸಮಾಧಾನಕ್ಕೆ ಗುರಿಯಾಗಲಿದ್ದೀರಿ. ಮಾತಿನ ಮೇಲೆ ನಿಗಾ ಇರಲಿ. ಕಾರ್ಯಕ್ಷೇತ್ರದಲ್ಲಿ ಹೊಸ ಯೋಜನೆಗಳಿಗೆ ಕೈ ಹಾಕಬೇಕಾಗುತ್ತದೆ. ನಿರುದ್ಯೋಗಿಗಳು ಸೂಕ್ತ ಉದ್ಯೋಗಕ್ಕಾಗಿ ಕೆಲವು ದಿನ ಕಾಯುವುದು ಒಳಿತು.
 
ಸಿಂಹ: ಅಧಿಕ ಧನಲಾಭ ತರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ತಯಾರಿ ನಡೆಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಆದರೆ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
 
ಕನ್ಯಾ: ಬಯಸಿದ್ದೊಂದು ಆಗಿದ್ದೊಂದು ಎನ್ನುವಂತಹ ಪರಿಸ್ಥಿತಿ ನಿಮ್ಮದಾಗಲಿದೆ. ಯಾವುದೇ ಕೆಲಸ ಮಾಡುವ ಮೊದಲು ಕುಲದೇವರ ಪ್ರಾರ್ಥನೆ ನಡೆಸಿ ಮುನ್ನಡೆಯಿರಿ. ಸಹೋದರಿಯರ ವಿವಾಹ ಪ್ರಯತ್ನಕ್ಕೆ ಹಿನ್ನಡೆಯಾಗಲಿದೆ. ತಾಳ್ಮೆ ಕಳೆದುಕೊಳ್ಳಬೇಡಿ.
 
ತುಲಾ: ಮನೆ, ವಾಸಸ್ಥಳ ಬದಲಾವಣೆಗೆ ಚಿಂತನೆ ನಡೆಸಲಿದ್ದೀರಿ. ಮನೆ ಮಾಲಿಕರೊಂದಿಗೆ ಸಂಘರ್ಷ ನಡೆಸಬೇಕಾಗುತ್ತದೆ. ವಾತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರದಂತೆ ಎಚ್ಚರಿಕೆ ವಹಿಸಿ. ಹಿರಿಯರ ಮಾತು ಅಪಥ್ಯವೆನಿಸಬಹುದು. ಆದರೆ ಎಚ್ಚರಿಕೆಯಿಂದ ಹೆಜ್ಜೆಯಿಡಿ.
 
ವೃಶ್ಚಿಕ: ವೃತ್ತಿರಂಗದಲ್ಲಿ ಅನಗತ್ಯ ವಿವಾದಗಳನ್ನು ಮೈಮೇಲೆಳೆದುಕೊಳ್ಳಬೇಡಿ. ನಿರುದ್ಯೋಗಿಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಲಿದೆ. ವ್ಯಾಪಾರಿಗಳಿಗೆ ವ್ಯವಹಾರ ನಡೆಸಲು ತೊಂದರೆಗಳು ಎದುರಾಗಲಿವೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
 
ಧನು: ಪ್ರೀತಿ ಪಾತ್ರರ ಮೆಚ್ಚಿಸಲು ಸರ್ಕಸ್ ಮಾಡಲಿದ್ದೀರಿ. ಅನಗತ್ಯವಾಗಿ ಇನ್ನೊಬ್ಬರ ವಿಚಾರದಲ್ಲಿ ಮೂಗು ತೂರಿಸಲು ಯತ್ನಿಸಬೇಡಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಅವಿವಾಹಿತರಿಗೆ ಶೀಘ‍್ರ ಶುಭ ವಾರ್ತೆ ಸಿಗಲಿದೆ.
 
ಮಕರ: ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಕಾಡಲಿದೆ. ಕುಲದೇವರ ಪ್ರಾರ್ಥನೆ ನಡೆಸಿ ದಿನದಾರಂಭ ಮಾಡಿದರೆ ಶುಭವಾಗುವುದು. ಅನಿರೀಕ್ಷಿತವಾಗಿ ಮನೆಗೆ ಅಪರೂಪದ ಅತಿಥಿಯ ಭೇಟಿಯಾಗಲಿದ್ದು, ಸಂತಸವಾಗಲಿದೆ. ದೇವತಾ ಪ್ರಾರ್ಥನೆ ಮರೆಯದಿರಿ.
 
ಕುಂಭ: ಕೆಟ್ಟ ಸ್ನೇಹ ಸಂಗದಿಂದ ಆದಷ್ಟು ದೂರವಿರುವುದು ಉತ್ತಮ. ಧಾರ್ಮಿಕ ಕಾರ್ಯಗಳಿಗೆ ಧನ ವ್ಯಯ ಮಾಡಲಿದ್ದೀರಿ. ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಹೊಸ ವ್ಯವಹಾರಗಳಿಗೆ ಬಂಡವಾಳ ಹೂಡಲು ಕೆಲವು ದಿನ ಕಾಯುವುದು ಒಳಿತು.
 
ಮೀನ: ನೂತನ ದಂಪತಿಗಳು ಇಷ್ಟಾರ್ಥ ಸಿದ್ಧಿಗಾಗಿ ದೇವರ ಮೊರೆ ಹೋಗುವರು. ಕೆಳ ಹಂತದ ನೌಕರರಿಗೆ ಉದ್ಯೋಗ ನಷ್ಟವಾಗುವ ಭೀತಿ ಎದುರಾಗಲಿದೆ. ಕೌಟುಂಬಿಕವಾಗಿ ಜವಾಬ್ಧಾರಿ ಹೆಚ್ಚಲಿದೆ. ಆದರೆ ಪ್ರೀತಿ ಪಾತ್ರರೊಂದಿಗೆ ಸುಂದರ ಸಮಯ ಕಳೆಯಲಿದ್ದೀರಿ.
ಇದರಲ್ಲಿ ಇನ್ನಷ್ಟು ಓದಿ :