ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯರಂಗದಲ್ಲಿ ಬಿಡುವಿಲ್ಲದ ಕೆಲಸದಿಂದ ದೇಹಾಯಾಸವಾಗಬಹುದು. ಕೌಟುಂಬಿಕವಾಗಿ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಕನಸು ನನಸು ಮಾಡಲು ಸಾಧ್ಯವಾಗದೇ ನಿರಾಸೆಯಾಗಬಹುದು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಸುಲಭವಾಗಿ ಕಾರ್ಯಗಳು ನಡೆಯದೇ ಇದ್ದಾಗ ಕ್ರಿಯಾತ್ಮಕ ದಾರಿಗಳ ಬಗ್ಗೆ ಯೋಚನೆ ನಡೆಸುವಿರಿ. ಹೊಸ ಮಿತ್ರರ ಸಂಪಾದನೆ ಮಾಡಲಿದ್ದೀರಿ. ಯಂತ್ರೋಪಕರಣ ಕೆಲಸ ಮಾಡುವವರಿಗೆ ಹಿನ್ನಡೆಯಾಗಬಹುದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.ಮಿಥುನ: ಹಳೆಯ ನೆನಪುಗಳು ಕಾಡಿ ಮಾನಸಿಕವಾಗಿ ಒಂದು