ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 3 ಏಪ್ರಿಲ್ 2020 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.  
> ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ  ಅಸಡ್ಡೆ ಅಸಹನೆ ಹೆಚ್ಚಿಸಲಿದೆ. ನಿಮ್ಮ ಕೆಲಸಗಳಲ್ಲೂ ಹರಕೆ ಸಂದಾಯ ಮಾಡಿದರೆ ಸಾಕು ಎಂಬ ಮನೋಭಾವ ಬರಲಿದೆ. ಸಂಗಾತಿಯೊಂದಿಗೆ ಅನಗತ್ಯ ಮನಸ್ತಾಪ ಮಾಡಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.>   ವೃಷಭ: ಕೂಡಿಟ್ಟ ಹಣ ಕರಗಿ ಹೋದ ಚಿಂತೆ ಕಾಡಲಿದೆ. ಆರ್ಥಿಕವಾಗಿ ಧನಾದಾಯಕ್ಕೆ ನಾನಾ ಮಾರ್ಗಗಳನ್ನು ಯೋಚಿಸುವಿರಿ. ಸಂಗಾತಿಯ ಸಮಯೋಚಿತ ಸಲಹೆ ಉಪಯೋಗಕ್ಕೆ ಬರುವುದು. ಆರೋಗ್ಯದ ಬಗ್ಗೆ ವಿನಾಕಾರಣ ಚಿಂತೆ ಬೇಡಿ.
 
ಮಿಥುನ: ಮಿತ್ರರಿಂದ ಸಿಗುವ ನೆರವು ನಿಮ್ಮ ಕಷ್ಟಗಳನ್ನು ದೂರ ಮಾಡಲಿದೆ. ವ್ಯವಹಾರ ಕ್ಷೇತ್ರದಲ್ಲಿ ನಾನಾ ರೀತಿಯ ಅಡ್ಡಿ ಬಂದರೂ ಜಾಣ್ಮೆಯಿಂದ ನಿಭಾಯಿಸಲಿದ್ದೀರಿ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
 
ಕರ್ಕಟಕ: ಅಧಿಕ ಧನಲಾಭ ತರುವ ಯೋಜನೆಗಳಿಗೆ ಕೈ ಹಾಕಲಿದ್ದೀರಿ. ಅಪರಿಚಿತರೊಂದಿಗೆ ವ್ಯವಹರಿಸುವಾಗ ವಂಚನೆಗೊಳಗಾಗದಂತೆ ಎಚ್ಚರಿಕೆ ವಹಿಸಿ. ಹಣಕಾಸಿನ ತೊಂದರೆಗಳು ಎದುರಾಗಲಿವೆ. ಕಷ್ಟದ ದಿನಗಳನ್ನು ಎದುರಿಸಲು ಇಂದೇ ಸಿದ್ಧರಾಗಿ.
 
ಸಿಂಹ: ಅನೇಕ ರೀತಿಯ ಚಿಂತೆಗಳು ಮನದಲ್ಲಿ ಕಾಡಲಿದ್ದು, ಕೆಲಸ ಕಾರ್ಯಗಳಲ್ಲಿ ನಿರುತ್ಸಾಹ ಉಂಟಾಗಬಹುದು. ಅಂದುಕೊಂಡ ರೀತಿಯಲ್ಲಿ ನೆರವೇರದೇ ನಿರಾಸೆಯಾಗಬಹುದು. ಸಂಯಮ ಅಗತ್ಯ. ದೂರ ಸಂಚಾರವನ್ನು ಮುಂದೂಡುವುದು ಒಳಿತು.
 
ಕನ್ಯಾ: ನಿಮ್ಮ ಕೆಲವೊಂದು ಮಾತು ಮನೆಯಲ್ಲಿ ಶಾಂತಿ ಕದಡಲು ಕಾರಣವಾದೀತು. ದುಡುಕು ಮಾತು, ವರ್ತನೆಗೆ ಕಡಿವಾಣ ಹಾಕುವುದು ಉತ್ತಮ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಿತ್ರ ವೃಂದದವರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ.
 
ತುಲಾ: ಎಷ್ಟೋ ದಿನದಿಂದ ಭೇಟಿಯಾಗಬೇಕೆಂದುಕೊಂಡಿದ್ದ ವ್ಯಕ್ತಿಗಳ ಭೇಟಿಯಾಗಲಿದ್ದೀರಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿದ್ದರೂ ಸಂಗಾತಿಯ ಸಹಕಾರದಿಂದ ಸುಗಮವಾಗಿ ನೆರವೇರಿಸುವಿರಿ. ಧಾರ್ಮಿಕವಾಗಿ ಭಕ್ತಿ ಹೆಚ್ಚಲಿದೆ. ದೇವತಾ ಪ್ರಾರ್ಥನೆ ಮಾಡುವಿರಿ.
 
ವೃಶ್ಚಿಕ: ವ್ಯವಹಾರದಲ್ಲಿ ಇದುವರೆಗೆ ನಿಮ್ಮ ಬೆನ್ನ ಹಿಂದೆ ನಡೆಯುತ್ತಿದ್ದ ಸಂಚುಗಳು ಬಯಲಾಗಲಿವೆ. ಶತ್ರುಪೀಡೆ ನಾಶವಾಗಿ ಆರ್ಥಿಕವಾಗಿ ಬರಬೇಕಿದ್ದ ಹಣ ಸಂದಾಯವಾಗಲಿದೆ. ಅವಿವಾಹಿತರಿಗೆ ವಿವಾಹ ಸಂಬಂಧ ಮಾತುಕತೆಗಳು ಫಲಪ್ರದವಾಗಲಿದೆ.
 
ಧನು: ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದ ಅಗತ್ಯವಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.
 
ಮಕರ: ಅರ್ಧಕ್ಕೇ ನಿಂತ ಕೆಲಸಗಳಿಗೆ ಮರಳಿ ಚಾಲನೆ ನೀಡಲಿದ್ದೀರಿ. ಮನೆ ರಿಪೇರಿ, ಗೃಹ ಸಂಬಂಧೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಸಂಗಾತಿಗೆ ಖುಷಿ ಕೊಡುವ ಕೆಲಸ ಮಾಡಲಿದ್ದೀರಿ. ಮಹಿಳೆಯರಿಗೆ ಚಿನ್ನಾಭರಣವನ್ನು ಜೋಪಾನವಾಗಿ ರಕ್ಷಿಸುವ ಹೊಣೆಗಾರಿಕೆ ಬೀಳಲಿದೆ.
 
ಕುಂಭ: ದುರ್ಜನರ ಸಂಗ ಯಾವತ್ತೂ ಗರ್ವಭಂಗ ಎಂಬುದನ್ನು ಮರೆಯಬೇಡಿ. ಕೆಟ್ಟ ಸ್ನೇಹ ಸಂಗದಿಂದ ಹೊರಬಾರದೇ ಇದ್ದರೆ ಅಪವಾದ ತಪ್ಪದು. ಹಿರಿಯರಿಗೆ ಧಾರ್ಮಿಕ ಕ್ಷೇತ್ರದ ಸಂದರ್ಶನ ಯೋಗವಿದೆ. ಸ್ವ ಉದ್ಯೋಗಿಗಳಿಗೆ ಆರ್ಥಿಕವಾಗಿ ಲಾಭವಾಗಲಿದೆ.
 
ಮೀನ: ಮಹಿಳೆಯರಿಗೆ ಗೃಹ ಕೃತ್ಯಗಳ ಹೊರೆ ಅನುಭವಕ್ಕೆ ಬರಲಿದೆ. ವಿನಾಕಾರಣ ಮನಸ್ಸಿಗೆ ಇಲ್ಲದ ವಿಚಾರ ತಂದುಕೊಳ್ಳಬೇಡಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಿರಿ. ಇಷ್ಟ ಭೋಜನ ಯೋಗವಿದೆ. ಆದರೆ ನಾಲಿಗೆ ಚಪಲಕ್ಕೆ ಕಡಿವಾಣವಿರಲಿ.ಇದರಲ್ಲಿ ಇನ್ನಷ್ಟು ಓದಿ :