ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಸಾಂಸಾರಿಕವಾಗಿ ಅತೀವ ಸಂಯಮ ಅಗತ್ಯ. ನಿಮ್ಮ ಕೆಲವೊಂದು ನಿರ್ಧಾರಗಳು ಕುಟುಂಬ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಬಹುದು. ಕಾರ್ಯಕ್ಷೇತ್ರದಲ್ಲಿ ಉತ್ಸಾಹದ ಕೊರತೆ ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.ವೃಷಭ: ವಿನಾಕಾರಣ ಚಿಂತೆ ಮಾಡಿಕೊಂಡು ನಿಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ. ಇಷ್ಟಮಿತ್ರರನ್ನು ಭೇಟಿಯಾಗುವ ಭಾಗ್ಯವಿದೆ. ಅವಿವಾಹಿತರ ವಿವಾಹ ಮಾತುಕತೆ ಮುಂದೂಡಿಕೆಯಾಗಲಿದೆ. ಕೃಷಿಕರಿಗೆ ಬೆಳೆಗೆ ತಕ್ಕ ಬೆಲೆ ಸಿಗದೇ ನಿರಾಸೆಯಾಗಬಹುದು.ಮಿಥುನ: ಆಸ್ತಿ ವಿವಾದಗಳಿಗೆ ಹಿರಿಯರ