ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನಿಮ್ಮ ನಿರ್ಧಾರಗಳಲ್ಲಿ ಸ್ಥಿರತೆಯ ಕೊರತೆ ಕಂಡುಬರಲಿದೆ. ಮಾನಸಿಕವಾಗಿ ಚಿತ್ತ ಚಾಂಚಲ್ಯ ಕಾಡಲಿದೆ. ಉದ್ಯೋಗದ ಬಗ್ಗೆ ಚಿಂತೆಯಾಗಲಿದೆ. ಸಾಂಸಾರಿಕವಾಗಿ ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಲು ಕಲಿಯಬೇಕಿದೆ. ದುಂದು ವೆಚ್ಚ ಬೇಡ.ವೃಷಭ: ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ಅಲೆದಾಡಬೇಕಾದೀತು. ಹೆಚ್ಚಿನ ಧನ ಸಂಪಾದನೆಗೆ ನಾನಾ ಮಾರ್ಗಗಳನ್ನು ಯೋಚಿಸಲಿದ್ದೀರಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಒದಗಿಬರುವುದು. ಕುಲದೇವರ ಪ್ರಾರ್ಥನೆಯಿಂದ ಇಷ್ಟಸಿದ್ಧಿ.ಮಿಥುನ: ಸಂತಾನಾಪೇಕ್ಷಿತ ದಂಪತಿಗಳು