ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕೆಲಸದ ಬಗ್ಗೆ ಚಿಂತೆಯಾಗಲಿದೆ. ನೂತನವಾಗಿ ಉದ್ಯೋಗಕ್ಕೆ ಸೇರಿಕೊಂಡವರಿಗೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಚಿಂತೆ. ಕುಲದೇವರ ಪ್ರಾರ್ಥನೆಯಿಂದ ನೆಮ್ಮದಿ ಪಡೆಯುವಿರಿ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಖರ್ಚು ವೆಚ್ಚದ ಬಗ್ಗೆ ಹಿಡಿತವಿರಲಿ.ವೃಷಭ: ಸರಕಾರಿ ಅಧಿಕಾರಿಗಳಿಗೆ ಹೊಸ ಸಮಸ್ಯೆಗಳು, ಸವಾಲುಗಳು ಎದುರಾಗಲಿವೆ. ಲೆಕ್ಕ ಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಬೇಕು. ನಿರುದ್ಯೋಗಿಗಳು ಉದ್ಯೋಗ ಅನ್ವೇಷಣೆಗಾಗಿ ಸಂಚಾರ ಮಾಡಬೇಕಾಗುತ್ತದೆ. ಮಕ್ಕಳ ಬಗ್ಗೆ ನಿಗಾ ವಹಿಸಿ.ಮಿಥುನ: ನೂತನ ದಂಪತಿಗಳ ಸಂತಾನಾಪೇಕ್ಷೆ