ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕಾರ್ಯಕ್ಷೇತ್ರದಲ್ಲಿ ನಡೆಯುವ ಬೆಳವಣಿಗೆಗಳು ನಿಮ್ಮ ಚಿಂತೆ ಹೆಚ್ಚಿಸಲಿದೆ. ಹೊಸ ಉದ್ಯೋಗಾವಕಾಶಗಳು ಬಂದರೂ ಸ್ವಲ್ಪದರಲ್ಲೇ ಕೈ ತಪ್ಪಿ ಹೋಗುವುದರಿಂದ ನಿರಾಸೆಯಾಗಬಹುದು. ದೈವ ಭಕ್ತಿ ಹೆಚ್ಚಲಿದೆ. ಕುಲದೇವರ ಪ್ರಾರ್ಥನೆ ಮಾಡಲಿದ್ದೀರಿ.ವೃಷಭ: ವ್ಯಾಪಾರಿ ವರ್ಗದವರಿಗೆ ವ್ಯವಹಾರದಲ್ಲಿ ಪೈಪೋಟಿ ಎದುರಿಸಬೇಕಾಗುತ್ತದೆ. ಮಕ್ಕಳ ವಿಚಾರದಲ್ಲಿ ಅಂದುಕೊಂಡಿದ್ದನ್ನು ಪೂರ್ತಿ ಮಾಡಲಿದ್ದೀರಿ. ಕಾರ್ಯನಿಮಿತ್ತ ಕಿರು ಓಡಾಟ ನಡೆಸಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.ಮಿಥುನ: ಉದ್ಯೋಗಿಗಳಿಗೆ ಉದ್ಯೋಗ ಬದಲಾವಣೆಯ ಅವಕಾಶಗಳು ಸಿಗಲಿವೆ.