Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 15 ಮೇ 2020 (08:48 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಅಂದುಕೊಂಡಿದ್ದು ಯಾವುದೂ ನಡೆಯುತ್ತಿಲ್ಲ ಎಂಬ ಬೇಸರ ಮನಸ್ಸು ಘಾಸಿ ಮಾಡಲಿದೆ. ಕುಟುಂಬ ಸದಸ್ಯರ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ವ್ಯಾಪಾರಿಗಳಿಗೆ ತೀವ್ರ ಪೈಪೋಟಿ ಎದುರಾಗಲಿದೆ. ಉದ್ಯೋಗ ರಂಗದಲ್ಲಿ ಚೇತರಿಕೆ ಕಂಡುಬರುವುದು.
 
ವೃಷಭ: ಮಕ್ಕಳ ಸಂಬಂಧ ಕೆಲವು ನಿರ್ಧಾರ ಕೈಗೊಳ್ಳುವಾಗ ಗೊಂದಲ ಕಾಡಲಿದೆ. ಮಿತ್ರರೊಂದಿಗೆ ಮಾತುಕತೆ, ಭೇಟಿಯಿಂದ ಮನಸ್ಸು ಹಗುರವಾಗಲಿದೆ. ಹೊಸ ಸ್ಥಳಗಳಿಗೆ ಭೇಟಿಯಾಗುವ ಯೋಗವಿದೆ. ಸರಕಾರಿ ಉದ್ಯೋಗಿಗಳಿಗೆ ಬಿಡುವಿಲ್ಲದ ದುಡಿಮೆ ತಪ್ಪದು.
 
ಮಿಥುನ: ತಾತ್ಕಾಲಿಕ ಉದ್ಯೋಗಿಗಳು ಸ್ಥಿರ ಉದ್ಯೋಗಕ್ಕಾಗಿ ಪ್ರಯತ್ನಪಡಲಿದ್ದಾರೆ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಧನವಿನಿಯೋಗ ಮಾಡಲಿದ್ದೀರಿ. ಹೊಸ ಮಿತ್ರರ ಸಂಪಾದಿಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕರ್ಕಟಕ: ಕಾರ್ಯಕ್ಷೇತ್ರದಲ್ಲಿ ನಿಮ್ಮ ಎದುರು ಶತ್ರುಗಳಿಗೆ ಹಿನ್ನಡೆಯಾಗಲಿದೆ. ಆತ್ಮವಿಶ್ವಾಸವೇ ನಿಮ್ಮ ಬಲವಾಗಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಲಸ್ಯತನ ಕಂಡುಬರಬಹುದು. ವ್ಯಾಪಾರದಲ್ಲಿ ಚೇತರಿಕೆ ಕಾಣಲಿದ್ದೀರಿ. ದೇವತಾ ಪ್ರಾರ್ಥನೆ ಮಾಡಿ.
 
ಸಿಂಹ: ನಿರುದ್ಯೋಗಿಗಳಿಗೆ ಹಲವಾರು ಉದ್ಯೋಗಾವಕಾಶಗಳು ಒದಗಿಬರಲಿವೆ. ಸರಿಯಾದ ಮಾರ್ಗವನ್ನು ವಿವೇಚನೆಯಿಂದ ಆಯ್ದುಕೊಳ್ಳಿ. ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
 
 
ಕನ್ಯಾ: ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟು ತೋರಿಬರಲಿದೆ. ಧನಾರ್ಜನೆಗೆ ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ವೃತ್ತಿರಂಗದಲ್ಲಿ ನಿಮ್ಮ ಮೇಲೆ ಸಹೋದ್ಯೋಗಿಗಳಿಗೆ ಅಸಮಾಧಾನವುಂಟಾಗಬಹುದು. ತಾಳ್ಮೆಯಿರಲಿ. ಸಂಗಾತಿಯ ಮಾತಿಗೆ ಬೆಲೆಕೊಡಿ.
 
ತುಲಾ: ವೃತ್ತಿರಂಗದಲ್ಲಿ ಸ್ಥಗಿತಗೊಂಡ ಕೆಲಸಗಳಿಗೆ ಮರುಚಾಲನೆ ನೀಡಲಿದ್ದೀರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗುವುದರಿಂದ ಸಂತಸವಾಗಲಿದೆ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಿಗಲಿದೆ. ಕೌಟುಂಬಿಕವಾಗಿ ಹೊಣೆಗಾರಿಕೆ ಹೆಚ್ಚಲಿದೆ.
 
ವೃಶ್ಚಿಕ: ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಯಶಸ್ಸು ಕಂಡುಬರುವುದು. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಮನೋಕಾಮನೆಗಳನ್ನು ಪೂರ್ತಿಗೊಳಿಸುವಿರಿ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ಸಿಗಲಿದೆ.
 
ಧನು: ಅನಿರೀಕ್ಷಿತವಾಗಿ ಪ್ರೀತಿ ಪಾತ್ರರನ್ನು ಭೇಟಿಯಾಗುವ ಸಂದರ್ಭ ಒದಗಿಬರಲಿದ್ದು, ಮನಸ್ಸಿಗೆ ಸಂತಸವಾಗಲಿದೆ. ನಿರೀಕ್ಷಿತ ಕೆಲಸಗಳಿಗೆ ಅಡೆತಡೆಗಳು ಬಂದರೂ ಅಂತಿಮವಾಗಿ ನಿಮ್ಮ ಜಯವನ್ನು ತಡೆಯಲು ಯಾರಿಂದಲೂ ಸಾಧ‍್ಯವಾಗದು.
 
ಮಕರ: ಧನಾಗಮನವಾಗುವುದರಿಂದ ನಿರೀಕ್ಷಿತ ಕೆಲಸಗಳನ್ನು ನಿಗದಿತ ಸಮಯದಲ್ಲೇ ಪೂರ್ತಿ ಮಾಡುವಿರಿ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಾಣಲಿದ್ದೀರಿ. ನಯವಂಚಕರ ಬಗ್ಗೆ ಎಚ್ಚರಿಕೆಯಿರಲಿ. ಮನೆ ರಿಪೇರಿ ಕೆಲಸಗಳಿಗಾಗಿ ಧನವ್ಯಯ ಮಾಡಲಿದ್ದೀರಿ.
 
ಕುಂಭ: ನಿಮ್ಮ ಅಭಿವೃದ್ಧಿಯನ್ನು ಯಾರೂ ತಡೆಯಲಾಗದು. ನೆರೆಹೊರೆಯವರ ಚಾಡಿ ಮಾತುಗಳಿಗೆ ಕಿವಿಗೊಡಬೇಕಿಲ್ಲ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ. ರಾಜಕೀಯ ವರ್ಗದವರಿಗೆ ನಿರ್ಧಾರ ಕೈಗೊಳ್ಳುವಾಗ ಗೊಂದಲ ಕಾಡಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ.
 
ಮೀನ: ಚಿತ್ತ ಚಾಂಚಲ್ಯದಿಂದಾಗಿ ನಿರ್ಧಾರ ಕೈಗೊಳ್ಳುವಾಗ ಗೊಂದಲಗಳು ಕಾಡಲಿವೆ. ಉದ್ಯೋಗಿಗಳಿಗೆ ಉದ್ಯೊಗ ಬದಲಾವಣೆ ಸಾಧ‍್ಯತೆ. ಇತರರ ಚಾಡಿ ಮಾತುಗಳಿಗೆ ಕಿವಿ ಗೊಡಬೇಕಿಲ್ಲ. ಉತ್ತಮ ಧನಾಗಮನವಾಗಲಿದ್ದು, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.
ಇದರಲ್ಲಿ ಇನ್ನಷ್ಟು ಓದಿ :