Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಬುಧವಾರ, 20 ಮೇ 2020 (08:55 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ರಂಗದಲ್ಲಿ ಹೊಸ ಸವಾಲುಗಳಿಗೆ ಸಿದ್ಧರಾಗಬೇಕಾಗುತ್ತದೆ. ಮೇಲಧಿಕಾರಿಗಳ ಸಲಹೆ ಸೂಚನೆ ಪಾಲಿಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ. ಸಾಂಸಾರಿಕವಾಗಿ ಪ್ರೀತಿ ಪಾತ್ರರೊಂದಿಗೆ ಮಾತುಕತೆ ನಡೆಸುವುದರಿಂದ ಸಂತಸವಾಗಲಿದೆ.
 
ವೃಷಭ: ಸಂಚಾರದಲ್ಲಿ ಅನೇಕ ಅಡೆತಡೆಗಳು ತೋರಿಬಂದೀತು. ಮನೆ ರಿಪೇರಿಗಾಗಿ ಖರ್ಚು ವೆಚ್ಚಗಳಾಗಲಿವೆ. ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ವಿವಾಹ ಪ್ರಸ್ತಾಪಗಳು ಕೂಡಿಬರಲಿವೆ. ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ದೇವತಾ ಪ್ರಾರ್ಥನೆ ಮಾಡಿ.
 
ಮಿಥುನ:  ಮಾನಸಿಕವಾಗಿ ಗೊಂದಲವುಂಟಾಗಲಿದ್ದು, ದೇವತಾ ಪ್ರಾರ್ಥನೆಯಿಂದ ನೆಮ್ಮದಿ ಕಾಣುವಿರಿ. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸಲು ಹೋಗಬೇಡಿ. ಹಿತ ಶತ್ರುಗಳಿಂದ ಕೆಲಸ ಕಾರ್ಯಗಳಿಗೆ ತೊಂದರೆಯಾಗಬಹುದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯ.
 
ಕರ್ಕಟಕ: ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಅಂದುಕೊಂಡ ಕೆಲಸ ಕಾರ್ಯಗಳನ್ನು ನೆರವೇರಿಸಲಿದ್ದೀರಿ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸ ಮಾಡಬೇಕಾಗುತ್ತದೆ. ತಾಳ್ಮೆ, ಸಂಯಮ ಅಗತ್ಯ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಸಿಂಹ: ನಿರುದ್ಯೋಗಿಗಳು ಸೂಕ್ತ ಅವಕಾಶಗಳನ್ನು ಆರಿಸುವಲ್ಲಿ ಸೋಲಲಿದ್ದಾರೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ವ್ಯಾಪಾರಿ ವರ್ಗದವರು ಮುನ್ನಡೆ ಕಾಣಲಿದ್ದಾರೆ. ಸಾಮಾಜಿಕವಾಗಿ ನಿಮ್ಮ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ.
 
 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಪೈಪೋಟಿ ಎದುರಿಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆ ಬರುವುದು. ಸಾಂಸಾರಿಕವಾಗಿ ನಿಮ್ಮ ನಿರ್ಧಾರಗಳು ಇತರರ ಅಸಹನೆಗೆ ಕಾರಣವಾಗಬಹುದು. ಗೃಹಬಳಕೆ ವಸ್ತುಗಳಿಗೆ ಖರ್ಚು ವೆಚ್ಚಗಳಾಗಲಿವೆ.
 
ತುಲಾ: ವ್ಯಾಪಾರ ವ್ಯವಹಾರಗಳು ಕೈಗೂಡಲಿದ್ದು, ಆರ್ಥಿಕವಾಗಿ ಅಭಿವೃದ್ಧಿ ಕಾಣಲಿದ್ದೀರಿ. ಆದರೆ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಮನೆಗೆ ಅನಿರೀಕ್ಷಿತವಾಗಿ ಬರುವ ಅತಿಥಿಗಳಿಂದ ಸಂತಸವಾಗಲಿದೆ. ಮನೋಭಿಲಾಷೆ ಈಡೇರಲಿದೆ.
 
ವೃಶ್ಚಿಕ: ಮನೆಯಲ್ಲಿ ನಡೆಯಬೇಕಿದ್ದ ಶುಭ ಮಂಗಲ ಕಾರ್ಯಗಳು ಮುಂದೂಡಿಕೆಯಾಗಲಿದೆ. ಆಕಸ್ಮಿಕವಾಗಿ ಧನಲಾಭವಾಗಲಿದೆ. ಹಿರಿಯರೊಂದಿಗೆ ಸಂಘರ್ಷ ನಡೆಸದೇ ಅವರ ಸಲಹೆಗಳನ್ನು ಪಾಲಿಸುವುದು ಒಳಿತು. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
 
ಧನು: ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆಗೆ ಭಂಗ ತರುವ ಘಟನೆಗಳು ನಡೆಯಲಿದೆ. ಆಲಸ್ಯತನ ಬಿಟ್ಟು ಪರಿಶ್ರಮವಹಿಸಬೇಕು. ಖರ್ಚು ವೆಚ್ಚದ ಬಗ್ಗೆ ನಿಗಾ ವಹಿಸಿ. ನೆರೆಹೊರೆಯವರೊಂದಿಗೆ ಎಚ್ಚರಿಕೆಯಿಂದ ವರ್ತಿಸಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಮಕರ: ಕೌಟುಂಬಿಕವಾಗಿ ನಿಮ್ಮ ಸುಖ ಸಂತೋಷಕ್ಕೆ ಯಾರೂ ಕಡಿವಾಣ ಹಾಕಲಾಗದು. ಮಕ್ಕಳ ವಿಚಾರವಾಗಿ ಹೊಸ ನಿರ್ಧಾರ ಕೈಗೊಳ್ಳಲಿದ್ದೀರಿ. ಆರ್ಥಿಕವಾಗಿ ಲೆಕ್ಕಾಚಾರದ ಹೆಜ್ಜೆಯಿಡುವುದು ಅಗತ್ಯ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.
 
ಕುಂಭ: ಮನಸ್ಸಿಗೆ ಅಸಮಾಧಾನವುಂಟು ಮಾಡುವಂತಹ ಘಟನೆಗಳು ನಡೆದೀತು. ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಮಕ್ಕಳ ದೇಹಾರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ. ಧನಲಾಭವಾಗಲಿದೆ.
 
ಮೀನ: ವೃತ್ತಿರಂಗದಲ್ಲಿ ನಿಮ್ಮ ಕರ್ತವ್ಯ ಪ್ರಜ್ಞೆಯಿಂದ ಸಂಭಾವ್ಯ ಅಪಾಯ ತಪ್ಪಲಿದೆ. ಕೃಷಿಕರಿಗೆ ಬೆಳೆಗೆ ಪೂರಕ ವಾತಾವರಣ ಒದಗಿಬರಲಿದೆ. ಕೌಟುಂಬಿಕವಾಗಿ ಅಭಿವೃದ್ಧಿ ತೋರಿಬರಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ.
ಇದರಲ್ಲಿ ಇನ್ನಷ್ಟು ಓದಿ :