Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶುಕ್ರವಾರ, 22 ಮೇ 2020 (09:01 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಅನಿರೀಕ್ಷಿತವಾಗಿ ಧನಾಗಮನವಾಗಲಿದ್ದು, ನಿರೀಕ್ಷಿತ ಕೆಲಸಗಳು ಸುಗಮವಾಗಿ ನಡೆಯಲಿದೆ. ಹಿರಿಯರ ಆಶೀರ್ವಾದೊಂದಿಗೆ ಹೊಸ ಕೆಲಸಕ್ಕೆ ಕೈ ಹಾಕಿ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ವೃಷಭ: ವೃತ್ತಿರಂಗದಲ್ಲಿ ಉದ್ಯೋಗಿಗಳಿಗೆ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಕಾರ್ಮಿಕ ವರ್ಗದವರಿಗೆ ಉದ್ಯೋಗದಲ್ಲಿ ಉನ್ನತಿಯ ಯೋಗವಿದೆ. ವ್ಯಾಪಾರಿ ವರ್ಗದವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ಆದರೆ ಹಿತಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ.
 
ಮಿಥುನ: ವೃತ್ತಿರಂಗದಲ್ಲಿ ಹಳೆಯ ಶತ್ರುಗಳ ಕಾಟ ಕಾಡಲಿದೆ. ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರಿಗೆ ಮೇಲ್ದರ್ಜೆಗೇರುವ ಅವಕಾಶ ಒದಗಿಬರಲಿದೆ. ಅವಿವಾಹಿತರಿಗೆ ಶೀಘ‍್ರ ಕಂಕಣ ಬಲ ಕೂಡಿಬರಲಿದೆ. ಆದಾಯಕ್ಕೆ ಮೀರಿ ಖರ್ಚು ವೆಚ್ಚಗಳಾಗದಂತೆ ಎಚ್ಚರಿಕೆ ವಹಿಸಿ.
 
ಕರ್ಕಟಕ: ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗಕ್ಕೆ ಸಂದರ್ಶನ ಕರೆ ಬರುವುದು. ವಿವಾಹ ಮಾತುಕತೆಗಳಿಗೆ ಮುನ್ನಡೆ ಸಿಗಲಿದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಸಿಂಹ: ಸಾಂಸಾರಿಕವಾಗಿ ಉತ್ತಮ ಫಲಗಳು ದೊರೆಯಲಿವೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ ಮೂಡಲಿದೆ. ಧನಾಗಮನಕ್ಕೆ ನಾನಾ ದಾರಿಗಳನ್ನು ಹುಡುಕಲಿದ್ದೀರಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.
 
 
ಕನ್ಯಾ: ಆರ್ಥಿಕವಾಗಿ ಸ್ಥಿರ ಆದಾಯಕ್ಕೆ ಕತ್ತರಿ ಬೀಳಲಿದ್ದು, ಹಣಕಾಸಿನ ಮುಗ್ಗಟ್ಟು ತೋರಿಬರಬಹುದು. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗಲಿದೆ. ಕಾರ್ಯನಿಮಿತ್ತ ಅಧಿಕ ಓಡಾಟ ನಡೆಸಬೇಕಾಗುತ್ತದೆ.
 
ತುಲಾ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಹೆಚ್ಚಲಿದೆ. ವ್ಯವಹಾರದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದೆ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.
 
ವೃಶ್ಚಿಕ: ಶುಭ ಮಂಗಲ ಕಾರ್ಯಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆಯಾಗಲಿದೆ. ದೈಹಿಕ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಹಿರಿಯರ ಸಲಹೆಗಳು ಉಪಯೋಗಕ್ಕೆ ಬರುವುದು. ಅಧಿಕಾರಿ ವರ್ಗದವರೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಿ.
 
ಧನು: ವಿದ್ಯಾರ್ಥಿಗಳಿಗೆ ಪ್ರಯತ್ನಬಲದಿಂದ ಯಶಸ್ಸು ಸಿಗಲಿದೆ. ಸಹೋದರ ವರ್ಗದವರಿಂದ ಸಿಹಿ ಸುದ್ದಿ ಕೇಳಿಬರಲಿದೆ. ದಾಂಪತ್ಯದಲ್ಲಿ ಸಂತೋಷ ಸಿಗಲಿದೆ. ಆದರೆ ದುಡುಕಿ ಮಾತನಾಡಿ ಬೇರೆಯವರ ಮನಸ್ಸಿಗೆ ನೋವುಂಟು ಮಾಡಬೇಡಿ.
 
ಮಕರ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಉನ್ನತಿಯ ಯೋಗವಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆ ಎಲ್ಲರ ಮೆಚ್ಚುಗೆ ಗಳಿಸಲಿದೆ. ವಾಹನ ಚಾಲನೆ ಮಾಡುವಾಗ ಜಾಗರೂಕತೆ ವಹಿಸಿ. ದೇಹಾರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ದೂರವಾಗಲಿದೆ.
 
ಕುಂಭ: ನಕಾರಾತ್ಮಕ ಚಿಂತನೆಗಳಿಗೆ ಅವಕಾಶ ಮಾಡಿಕೊಡಬೇಡಿ. ನಿರುದ್ಯೋಗಿಳಿಗೆ ಉದ್ಯೋಗ ಸಂದರ್ಶನ ನಿಮಿತ್ತ ಪರ ಊರಿಗೆ ಪ್ರಯಾಣ ಮಾಡಬೇಕಾಗಬಹುದು. ಮಹಿಳೆಯರಿಗೆ ಆಕಸ್ಮಿಕ ಧನಲಾಭವಾಗಲಿದೆ. ಇಷ್ಟಮಿತ್ರರ ಭೇಟಿ ಮನಸ್ಸಿಗೆ ಮುದ ನೀಡಲಿದೆ.
 
ಮೀನ: ಮನೋಕಾಮನೆಗಳನ್ನು ಪೂರೈಸಲು ಹಲವು ಅಡ್ಡಿ ಆತಂಕಗಳು ಎದುರಾದೀತು. ನವದಂಪತಿಗಳಲ್ಲಿ ಹೊಂದಾಣಿಕೆ ಕೊರತೆ ಉಂಟಾಗಬಹುದು. ಪೋಷಕರ ಮನಸ್ಸಿಗೆ ನೋವುಂಟುಮಾಡಬೇಡಿ. ಅಧಿಕ ಓಡಾಟದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ.
ಇದರಲ್ಲಿ ಇನ್ನಷ್ಟು ಓದಿ :