ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕೆಲಸ ಕಾರ್ಯಗಳನ್ನು ಮುಗಿಸಿಕೊಡುವ ಒತ್ತಡವಿರಲಿದೆ. ಮೇಲಧಿಕಾರಿಗಳ ಸಲಹೆ ಸೂಚನೆ ಪಥ್ಯವಾಗದೇ ಹೋಗಬಹುದು. ಕುಟುಂಬದವರ ಹಿತಾಸಕ್ತಿಗೆ ಬೆಲೆ ಕೊಡಿ. ನಿರುದ್ಯೋಗಿಳು ಪೈಪೋಟಿ ಎದುರಿಸಬೇಕಾಗುತ್ತದೆ. ವ್ಯಾಪಾರಿಗಳಿಗೆ ಮೇಲುಗೈಯಾಗಲಿದೆ.ವೃಷಭ: ಸ್ವಂತ ವ್ಯಾಪಾರ, ವ್ಯವಹಾರ ಮಾಡುವವರಿಗೆ ಉನ್ನತಿಯ ಯೋಗವಿದೆ. ದೂರವಾಗಿದ್ದ ಸಂಬಂಧಗಳು ಮರಳಿ ಬೆಸೆಯುವುದು. ಮಕ್ಕಳಿಂದ ಸಂತಸ ನಿರೀಕ್ಷಿಸಬಹುದು. ಅವಕಾಶಗಳು ಬಂದಾಗ ಎರಡೂ ಕೈಗಳಿಂದ ಬಾಚಿಕೊಳ್ಳಿ. ದಿನದಂತ್ಯಕ್ಕೆ ಅಚ್ಚರಿಯ ವಿದ್ಯಮಾನ ನಡೆಯಲಿದೆ.ಮಿಥುನ: ಉದ್ಯೋಗ