ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯಕ್ಷೇತ್ರದಲ್ಲಿ ಜವಾಬ್ಧಾರಿ ಹೆಚ್ಚಲಿದೆ. ಹೆಚ್ಚಿನ ಓಡಾಟದಿಂದ ಆರೋಗ್ಯ ಸಮಸ್ಯೆಗಳು ಕಂಡುಬಂದೀತು. ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ. ಹಿರಿಯರಿಗೆ ನಿಮ್ಮ ಅಗತ್ಯ ಕಂಡುಬರಲಿದೆ. ಕುಲದೇವರ ಪ್ರಾರ್ಥನೆ ಮಾಡಿದರೆ ಒಳಿತು.ವೃಷಭ: ಹಣಕಾಸು ವಿಚಾರವಾಗಿ ಸ್ನೇಹಿತರೊಂದಿಗೆ ಮನಸ್ತಾಪ ಬಂದೀತು. ಹೀಗಾಗಿ ಸಾಲ ವ್ಯವಹಾರಗಳನ್ನು ಕೆಲವು ದಿನ ಮುಂದೂಡುವುದು ಉತ್ತಮ. ಹೊಸ ಯೋಜನೆಗಳಿಗೆ ಅವಕಾಶಗಳು ತೋರಿಬರಲಿವೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ