ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಅವಕಾಶಗಳು ಎಲ್ಲ ಕಡೆ ಇರಲಿವೆ. ಅದನ್ನು ಬಳಸಿಕೊಳ್ಳುವ ಜಾಣತನ ಬೇಕಷ್ಟೇ. ಅದೃಷ್ಟದ ಬೆಂಬಲದಿಂದ ಬಯಸಿದ್ದು ಕೈಗೆ ಬರಲಿವೆ. ದೂರ ಸಂಚಾರವನ್ನು ಮುಂದೂಡಬೇಕಾದ ಪರಿಸ್ಥಿತಿ ಬರಲಿದೆ. ಪ್ರೇಮಿಗಳಿಗೆ ಹಿರಿಯರ ಒಪ್ಪಿಗೆ ಸಿಗಲಿದೆ.ವೃಷಭ: ಮುಕ್ತ ಮನಸ್ಸಿನಿಂದ ನೋಡಿದರೆ ಸಮಸ್ಯೆಗಳ ಪರಿಹಾರಕ್ಕೆ ದಾರಿ ಸಿಗುವುದು. ನಿಮ್ಮ ಆತ್ಮಸ್ಥೈರ್ಯದಿಂದಲೇ ಕಷ್ಟದ ಕೆಲಸಗಳನ್ನೂ ಮಾಡಿ ಮುಗಿಸುವಿರಿ. ವ್ಯವಹಾರದಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ.