ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನೂತನ ದಂಪತಿಗಳಿಗೆ ಸಂತಾನಫಲ ಸೂಚನೆ ಸಿಗಲಿದೆ. ತಂದೆ-ಮಕ್ಕಳೊಡನೆ ಭಿನ್ನಾಭಿಪ್ರಾಯ ಮೂಡಬಹುದು. ತಾಳ್ಮೆ, ಸಂಯಮದಿಂದ ವರ್ತಿಸಿ. ಗೃಹಿಣಿಯರಿಗೆ ಕಾರ್ಯದೊತ್ತಡದಿಂದ ದೇಹ ಹೈರಾಣಾಗಬಹುದು. ವಿದ್ಯಾರ್ಥಿಗಳಿಗೆ ಮುನ್ನಡೆ.ವೃಷಭ: ವೃತ್ತಿರಂಗದಲ್ಲಿ ಎಂದೋ ಬಯಸಿದ್ದ ಉನ್ನತ ಸ್ಥಾನ ಮಾನ ಕೊನೆಗೂ ಕೈಗುಟುಕುವ ಕಾಲ ಬರಲಿದೆ. ಯಂತ್ರೋಪಕರಣ ಕೆಲಸ ಮಾಡುವವರಿಗೆ ಹಿನ್ನಡೆಯಾದೀತು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ. ದೇವತಾ ಪ್ರಾರ್ಥನೆ ಮಾಡಿ.ಮಿಥುನ: ತಾತ್ಕಾಲಿಕ ವೃತ್ತಿಯವರಿಗೆ ಮುನ್ನಡೆಯ ಯೋಗವಿದೆ.