ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಆಕಸ್ಮಿಕ ಪ್ರಯಾಣಗಳಿಗೆ ಸಿದ್ಧರಾಗಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಎದುರಿಸಲು ರೂಢಿ ಮಾಡಿಕೊಳ್ಳಬೇಕಾಗುತ್ತದೆ. ದೇಹಾರೋಗ್ಯ ಚಿಂತೆಗೆ ಕಾರಣವಾಗಬಹುದು. ಗೃಹಿಣಿಯರಿಗೆ ಕಾರ್ಯದೊತ್ತಡದಿಂದ ದೇಹಾಯಾಸವಾಗಬಹುದು.ವೃಷಭ: ಸರಕಾರಿ ಉದ್ಯೋಗಿಗಳಿಗೆ ಧನಾದಾಯ ಉತ್ತಮವಾಗಿರಲಿದೆ. ಅಂದುಕೊಂಡ ಕಾರ್ಯ ನೆರವೇರಿಸಲಿದ್ದೀರಿ. ಕೌಟುಂಬಿಕವಾಗಿ ಅನಪೇಕ್ಷಿತ ಅತಿಥಿಗಳ ಆಗಮನ ಇರಿಸುಮುರಿಸು ಉಂಟುಮಾಡಬಹುದು. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.ಮಿಥುನ: ದೇವತಾ ಕಾರ್ಯಗಳಲ್ಲಿ ಆಸಕ್ತಿ ತೋರಿಬರಲಿದೆ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ.