ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕಾರ್ಯರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ತಕ್ಕ ಅವಕಾಶಗಳು ಒದಗಿಬರಲಿದೆ. ಯೋಗ್ಯ ವಯಸ್ಕರಿಗೆ ಕಂಕಣ ಬಲ ಕೂಡಿಬರಲಿದೆ. ವ್ಯಾಪಾರೀ ವರ್ಗದವರಿಗೆ ಕೊಂಚ ನಷ್ಟವಾದೀತು. ಆರ್ಥಿಕ ವಿಚಾರಗಳ ಬಗ್ಗೆ ಸರಿಯಾದ ಯೋಜನೆ ಹಾಕಿಕೊಂಡರೆ ಉತ್ತಮ.ವೃಷಭ: ಪರ ದೂಷಣೆಯಿಂದ ಯಾವುದೇ ಪ್ರಯೋಜನವಾಗದು. ನಿಮ್ಮ ವೈಯಕ್ತಿಕ ಜೀವನ ಸರಿಪಡಿಸಲು ಮುಂದಾಗಬೇಕು. ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಸಂಪಾದನೆಗೆ ಯೋಗ ಒದಗಿಬರಲಿದೆ. ಹಿರಿಯರಿಗೆ ವಾತ ಸಂಬಂಧೀ ಆರೋಗ್ಯ