ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಕಷ್ಟದ ಸಮಯದಲ್ಲಿ ನಿಮ್ಮ ಸ್ವಯಂ ನೀತಿ ನಿಯಮಗಳೇ ಉಪಯೋಗಕ್ಕೆ ಬರಲಿದೆ. ಶಿಸ್ತಿನ ಜೀವನ ನಡೆಸಿದರೆ ತೊಂದರೆಯಾಗದು. ದೇಹಾರೋಗ್ಯದಲ್ಲಿ ಸುಧಾರಕಣೆ ಕಂಡುಬರಲಿದೆ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ.ವೃಷಭ: ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಹಿರಿಯರೊಂದಿಗೆ ವಿನಾಕಾರಣ ಸಂಘರ್ಷಕ್ಕಿಳಿಯಬೇಡಿ. ವಿದ್ಯಾರ್ಥಿಗಳಿಗೆ ಮುನ್ನಡೆಗೆ ಅವಕಾಶ ಸಿಗಲಿದೆ. ನಿರುದ್ಯೋಗಿಗಳು ಪಾಲಿಗೆ ಬಂದ ಅವಕಾಶಗಳನ್ನು ಬಳಸಿಕೊಳ್ಳಬೇಕು.ಮಿಥುನ: ಉದ್ಯೋಗ