ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕ್ಷುಲ್ಲುಕ ವಿಚಾರಗಳಿಗೆ ಆತ್ಮೀಯರೊಂದಿಗೆ ಸಂಘರ್ಷಕ್ಕಿಳಿಯಬೇಡಿ. ಇದರಿಂದ ಸಂಬಂಧಗಳು ಹಾಳಾಗಬಹುದು. ದೃಢ ನಿರ್ಧಾರ ಕೈಗೊಳ್ಳುವ ಮನಸ್ಸು ಮಾಡಬೇಕಿದೆ. ಅವಿವಾಹಿತರು ಯೋಗ್ಯ ಸಂಬಂಧಕ್ಕಾಗಿ ಹುಡುಕಾಟ ನಡೆಸಬೇಕಾಗುತ್ತದೆ.ವೃಷಭ: ಸಾಮಾಜಿಕವಾಗಿ ಬಯಸಿ ಸ್ಥಾನ ಮಾನ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿ ಸುಧಾರಣೆಗೆ ಮುಂದಾಗಲಿದ್ದೀರಿ.ಸಂಗಾತಿಯ ಕನಸುಗಳನ್ನು ನನಸು ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಸತ್ವ ಪರೀಕ್ಷೆಯ ಸಮಯವಿದು.ಮಿಥುನ: ಮನಸ್ಸಿನಲ್ಲಿ ಅಂದುಕೊಂಡಿದ್ದು ಒಂದು, ಆಗುವುದು ಇನ್ನೊಂದು ಎನ್ನುವ ಪರಿಸ್ಥಿತಿ