Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 20 ಸೆಪ್ಟಂಬರ್ 2020 (08:44 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ವ್ಯವಸಾಯಗಾರರಿಗೆ ಉತ್ತಮ ಅಭಿವೃದ್ಧಿದಾಯಕ ದಿನ. ಆರ್ಥಿಕವಾಗಿ ಬರಬೇಕಾದ ಬಾಕಿ ಹಣ ಪಾವತಿಯಾಗಲಿದ್ದು, ಚೇತರಿಕೆ ಕಂಡುಬರಲಿದೆ. ಹೊಸ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಆರೋಗ್ಯದಲ್ಲಿ ಇದುವರೆಗೆ ಇದ್ದ ಸಮಸ್ಯೆಗಳು ನಿವಾರಣೆಯಾಗಲಿದೆ.
 
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗೆ ಮನಸ್ಸು ಬಯಲಿದೆ.  ಸ್ವಯಂ ಉದ್ಯೋಗದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಪ್ರೀತಿ ಪಾತ್ರರ ಆರೋಗ್ಯದ ಬಗ್ಗೆ ಚಿಂತೆಯಾಗಲಿದೆ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿಯಾಗುವುದು. ದೇವತಾ ಪ್ರಾರ್ಥನೆ ಮಾಡಿ.
 
ಮಿಥುನ: ಆಧುನಿಕತೆಯ ಸುಖಲೋಲುಪಗಳ ಬಗ್ಗೆ ಮನಸ್ಸು ಸೆಳೆಯಲಿದೆ. ಆರ್ಥಿಕವಾಗಿ ಅಧಿಕ ಧನವ್ಯಯ ಮಾಡಿದರೆ ಮುಂದೆ ತೊಂದರೆಯಾದೀತು. ಇಷ್ಟ ಮಿತ್ರರೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ವಿದ್ಯಾರ್ಥಿಗಳಿಗೆ ಅಭ್ಯಾಸದ ಕಡೆಗೆ ಗಮನಹರಿಸಬೇಕಾಗುತ್ತದೆ.
 
ಕರ್ಕಟಕ: ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದ್ದು, ಸಂಭ್ರಮದ ವಾತಾವರಣವಿರಲಿದೆ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಕೊಡುವ ಯೋಗವಿದೆ.
 
ಸಿಂಹ: ಹೂಡಿಕೆ ವ್ಯವಹಾರಗಳು ಕೈ ಹಿಡಿಯಲಿವೆ. ಮನೆಯಲ್ಲಿ ಕುಟುಂಬ ಸದಸ್ಯರ ನಡುವೆ ಸಾಮರಸ್ಯದ ಕೊರತೆ ಕಂಡುಬಂದೀತು. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ಮನಸ್ಸಿಗೆ ಇಷ್ಟವಾಗುವವರ ಭೇಟಿ ನೆಮ್ಮದಿ ಕೊಡಲಿದೆ.


 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳಿಗೆ ಸಿದ್ಧತೆ ನಡೆಸುವಿರಿ. ಸಂಗಾತಿಯ ಕೆಲಸಗಳಿಗೆ ಹೆಗಲು ಕೊಡಲಿದ್ದೀರಿ. ಮಕ್ಕಳ ಜತೆ ಸಂತೋಷದ ಕ್ಷಣ ಅನುಭವಿಸುತ್ತೀರಿ. ಆದರೆ ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ನಾಲಿಗೆ ಚಪಲಕ್ಕೆ ಕಡಿವಾಣವಿರಲಿ.
 
ತುಲಾ: ಕೆಟ್ಟ ಜನರ ಸಂಗದಿಂದ ದೂರವಿದ್ದಷ್ಟು ಉತ್ತಮ. ನಿರುದ್ಯೋಗಿಗಳು ಸ್ವಯಂ ಉದ್ಯೋಗದ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಮನೆಗೆ ಬೇಕಾದ ವಸ್ತುಗಳ ಖರೀದಿ ಮಾಡಲಿದ್ದೀರಿ. ಅವಿವಾಹಿತರಿಗೆ ಯೋಗ್ಯ ಸಂಬಂಧ ಕೂಡಿಬರಲಿದೆ.
 
ವೃಶ್ಚಿಕ: ಆರ್ಥಿಕವಾಗಿ ಅಭಿವೃದ್ಧಿ ಕಂಡುಬರಲಿದ್ದು, ವ್ಯವಹಾರಗಳು ನಿಧಾನವಾಗಿ ಚೇತರಿಕೆಯಾಗಲಿದೆ. ಅಂದುಕೊಂಡಿದ್ದನ್ನು ಸಾಧಿಸಿದ ಸಂತಸ ನಿಮ್ಮದಾಗಲಿದೆ. ಹಿರಿಯರಿಗೆ ಆರೋಗ್ಯದಲ್ಲಿ ಏರುಪೇರಾದೀತು. ಕಾಳಜಿ ಅಗತ್ಯ. ಕಿರು ಸಂಚಾರ ಮಾಡುವಿರಿ.
 
ಧನು: ಬಹಳ ದಿನಗಳ ನಂತರ ಬಂಧು ಮಿತ್ರರ ಭೇಟಿಯಾದ ಸಂತಸ ನಿಮ್ಮದಾಗಲಿದೆ. ಆದರೆ ಮಾತಿನ ಮೇಲೆ ನಿಗಾ ಇರಲಿ. ನೆರೆಹೊರೆಯವರಿಗೆ ನಿಮ್ಮ ಗುಟ್ಟು ಬಿಟ್ಟುಕೊಡಬೇಡಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ.
 
ಮಕರ: ಗೃಹಿಣಿಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ಸಂಗಾತಿಯೊಂದಿಗೆ ಸುಂದರ ಕ್ಷಣ ಕಳೆಯಲಿದ್ದೀರಿ. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ. ಹಿರಿಯರ ಸಲಹೆಗಳನ್ನು ಪಾಲಿಸುವುದು ಅಗತ್ಯ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
 
ಕುಂಭ: ಸಂಗಾತಿಯ ದೇಹಾರೋಗ್ಯ ಚಿಂತೆಗೆ ಕಾರಣವಾಗಲಿದೆ. ಬಂಧುಮಿತ್ರರ ಚಾಡಿ ಮಾತುಗಳಿಂದ ಮನಸ್ಸಿಗೆ ಬೇಸರವಾದೀತು. ಆತ್ಮಸ್ಥೈರ್ಯ ರೂಢಿಸಿಕೊಳ್ಳಿ. ಆಸ್ತಿ, ವಾಹನ ಖರೀದಿಗೆ ಸಕಾಲ. ಭವಿಷ್ಯದ ಯೋಜನೆಗಳಿಗೆ ಚಾಲನೆ ನೀಡುವಿರಿ.
 
ಮೀನ: ನಿರುದ್ಯೋಗಿಗಳು ಉದ್ಯೋಗ ಸಂದರ್ಶನ ನಿಮಿತ್ತ ದೂರ ಸಂಚಾರ ಮಾಡಲಿದ್ದಾರೆ. ವಾಹನ ಸವಾರರಿಗೆ ಅಪಘಾತದ ಭಯವಿದ್ದು, ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ. ಬಹಳ ದಿನಗಳಿಂದ ಭೇಟಿಯಾಗಬೇಕೆಂದಿದ್ದ ವ್ಯಕ್ತಿಗಳ ಭೇಟಿಯಾಗಲಿದ್ದೀರಿ.
ಇದರಲ್ಲಿ ಇನ್ನಷ್ಟು ಓದಿ :