ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಸ್ವಾರ್ಥ ಸಾಧನೆಗಾಗಿ ನಿಮ್ಮ ಜತೆಗಿದ್ದವರ ಮುಖವಾಡ ಬಯಲಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಬೇರೆಯವರ ವಿಚಾರದಲ್ಲಿ ಮೂಗು ತೂರಿಸಲು ಹೋಗಬೇಡಿ. ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ತಾಳ್ಮೆಯಿರಲಿ.ವೃಷಭ: ವೃತ್ತಿರಂಗದಲ್ಲಿ ಹಲವು ಅವಕಾಶಗಳು ಒದಗಿಬಂದರೂ ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವಲಿದ್ದೀರಿ. ಹಿರಿಯರ ಸಲಹೆ ಸೂಚನೆಗಳಿಗೆ ಮನ್ನಣೆ ನೀಡಿ. ನಿಮ್ಮ ಬಳಿ ಸಹಾಯ ಅಪೇಕ್ಷಿಸಿ ಬರುವವರಿಗೆ ನಿರಾಶೆ ಮಾಡಬೇಡಿ.ಮಿಥುನ: ವಿನೋದ ಯಾತ್ರೆಗಾಗಿ ಸಿದ್ಧತೆ ಮಾಡಲಿದ್ದೀರಿ.