Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 17 ಅಕ್ಟೋಬರ್ 2020 (09:05 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಕಿರಿ ಕಿರಿಗೆ ತಾಳ್ಮೆಯೇ ಉತ್ತರವಾಗಲಿದೆ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ವೃಷಭ: ವ್ಯಾಪಾರ, ವ್ಯವಹಾರಗಳಲ್ಲಿ ಏಳಿಗೆ ಕಂಡುಬರಲಿದೆ. ಅಪರಿಚಿತರನ್ನು ನಂಬಿ ವ್ಯವಹಾರ ಮಾಡುವ ಮೊದಲು ಯೋಚಿಸಿ. ನಿಮ್ಮ ನಿರ್ಧಾರಗಳು ಕುಟುಂಬ ಸದಸ್ಯರ ಮೇಲೂ ಪರಿಣಾಮ ಬೀರಲಿದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.
 
ಮಿಥುನ: ಉದ್ಯೋಗ ರಂಗದಲ್ಲಿ ಸಮಸ್ಯೆಗಳಿಗೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು. ಸಂಗಾತಿಯ ಸಲಹೆಗಳನ್ನು ಪಾಲಿಸಿದರೆ ಉತ್ತಮ. ಮನೆಗೆ ಹೊಸ ಅತಿಥಿಗಳ ಆಗಮನವಾಗಲಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕಾಗುತ್ತದೆ.
 
ಕರ್ಕಟಕ: ನಿಮ್ಮ ಕೆಲಸಗಳಲ್ಲಿ ಮೂರನೆಯವರು ಮೂಗು ತೂರಿಸಿದಂತೆ ಎಚ್ಚರಿಕೆ ವಹಿಸಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗುವುದು. ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
 
ಸಿಂಹ: ನಾನಾ ರೀತಿಯ ವ್ಯಾಪಾರ, ವ್ಯವಹಾರಗಳ ಯೋಜನೆಗಳು ಹೊಳೆಯಲಿವೆ. ಸರಿಯಾಗಿ ಪರಾಮರ್ಶಿಸಿ ಮುನ್ನಡೆಯಿರಿ. ಆಸ್ತಿ ಖರೀದಿ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಯೋಗ್ಯ ವಯಸ್ಕರಿಗೆ ಸೂಕ್ತ ಸಂಬಂಧ ಕೂಡಿಬರಲಿದೆ.
 
ಕನ್ಯಾ: ನೂತನ ದಂಪತಿಗಳಿಗೆ ಮಧುಚಂದ್ರದ ಭಾಗ್ಯವಿದೆ. ವೃತ್ತಿರಂಗದಲ್ಲಿ ಸದವಕಾಶಗಳು ತೋರಿಬಂದಾಗ ಹಾಳು ಮಾಡಿಕೊಳ್ಳಬೇಡಿ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ. ವಿದ್ಯಾರ್ಥಿಗಳಿಗೆ ಪಟ್ಟ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.
 
ತುಲಾ: ನಿಮ್ಮ ಕೆಲವೊಂದು ನಿರ್ಧಾರಗಳು ಪ್ರೀತಿ ಪಾತ್ರರ ಮನಸ್ಸಿಗೆ ಇಷ್ಟವಾಗದೇ ಹೋಗಬಹುದು. ಹಿರಿಯರ ಮಾತುಗಳನ್ನು ಪಾಲಿಸಿ. ಕೋರ್ಟು ಕಚೇರಿ ವ್ಯವಹಾರಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ.
 
ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಬೇಕಾದರೆ ಕೆಲವೊಂದು ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕ್ರಯ ವಿಕ್ರಯ ವ್ಯವಹಾರಗಳಲ್ಲಿ ಲಾಭ ಕಂಡುಬರುವುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಧನು: ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಯಾಗಲಿದೆ. ವ್ಯವಹಾರಗಳಲ್ಲಿ ಹಂತ ಹಂತವಾಗಿ ಚೇತರಿಕೆ ಕಂಡುಬರುವುದು. ನಿಮ್ಮ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದು ಉತ್ತಮ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
 
ಮಕರ: ಅಂದುಕೊಂಡಿದ್ದ ಕೆಲಸ ಕಾರ್ಯಗಳನ್ನು ಪೂರ್ತಿ ಮಾಡಲು ಸಾಕಷ್ಟು ಅಡ್ಡಿ ಆತಂಕಗಳು ಎದುರಾಗಲಿವೆ. ಇಷ್ಟ ಮಿತ್ರರ ಭೇಟಿ, ಭೋಜನ ಯೋಗವಿದೆ. ದೈವಾನುಕೂಲದಿಂದ ಅವಿವಾಹಿತರಿಗೆ ಬಯಸಿದ ಸಂಬಂಧಗಳು ಕೂಡಿಬರಲಿವೆ.
 
ಕುಂಭ: ನಿಮ್ಮ ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಹೋದರೆ ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಬಹುದು. ಹಳೆಯ ಮಿತ್ರರ ಭೇಟಿ, ಮಾತುಕತೆ ಮನಸ್ಸಿಗೆ ಖುಷಿ ನೀಡಲಿದೆ.ಹಿರಿಯರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಯೋಗ.
 
ಮೀನ: ಬೇಡದ ವಿಚಾರಕ್ಕೆ ಅನಗತ್ಯ ತಲೆಕೆಡಿಸಿಕೊಂಡು ಮನಸ್ಸಿಗೆ ನೋವುಂಟು ಮಾಡಿಕೊಳ್ಳಬೇಡಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಮಹಿಳೆಯರಿಗೆ ಸದ್ಯದಲ್ಲೇ ಚಿನ್ನಾಭರಣ ಖರೀದಿ ಯೋಗವಿದೆ.


ಇದರಲ್ಲಿ ಇನ್ನಷ್ಟು ಓದಿ :