ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ಮಾನಸಿಕವಾಗಿ ಇದುವರೆಗೆ ಕಾಡುತ್ತಿದ್ದ ಸಮಸ್ಯೆಗಳಿಗೆ ಆಪ್ತರೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಕೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸದಿಂದ ದೇಹಾಯಾಸವಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಕೀಳರಿಮೆ ಕಾಡುವುದು. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗದೇ ನಿರಾಸೆಯಾದೀತು. ವೈಯಕ್ತಿಕ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ ಸಮಾಧಾನಗೊಳ್ಳುವಿರಿ.ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಎಲ್ಲವೂ ನೀವಂದುಕೊಂಡಂತೆಯೇ ನಡೆಯಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ