ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮಾನಸಿಕವಾಗಿ ಕಾಡುವ ಕೆಲವೊಂದು ವಿಚಾರಗಳಿಗೆ ಆಪ್ತರೊಂದಿಗೆ ದುಃಖ ಹಂಚಿಕೊಂಡು ಪರಿಹಾರ ಕಂಡುಕೊಳ್ಳಲಿದ್ದೀರಿ. ಸಂಗಾತಿಯ ಅಸಹಕಾರ ಮನಸ್ಸಿಗೆ ನೋವುಂಟುಮಾಡಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಸ್ಪಷ್ಟವಾದ ನಿರ್ಧಾರಕ್ಕೆ ಬರಲಾಗದೇ ಮಾನಸಿಕವಾಗಿ ಒದ್ದಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಉದಾಸೀನ ಪ್ರವೃತ್ತಿಯಿಂದ ಹಿನ್ನಡೆಯಾದೀತು. ವೃತ್ತಿಗೆ ಸಂಬಂಧಿಸಿದ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಎಚ್ಚರಿಕೆ ಅಗತ್ಯ.ಮಿಥುನ: ವಾಹನ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಮುಖ್ಯ. ಆಪ್ತ