ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕೆಳ ಹಂತದ ನೌಕರರಿಗೆ ಸೂಕ್ತ ವೇತನ ಸಿಗದೇ ಪರದಾಡಬೇಕಾಗುತ್ತದೆ. ಮೇಲಧಿಕಾರಿಗಳ ಅಸಡ್ಡೆ ನಿಮ್ಮ ಆಕ್ರೋಶ ಹೆಚ್ಚಿಸಲಿದೆ. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ವೃಷಭ: ಸುಖ, ದುಃಖಗಳು ಸಮನಾಗಿ ಬರಲಿವೆ. ಎಲ್ಲವನ್ನೂ ಎದುರಿಸಿಕೊಂಡು ಹೋಗುವ ತಾಳ್ಮೆ ಬೆಳೆಸಿಕೊಳ್ಳಬೇಕು. ಹಿರಿಯರ ದೇಹಾರೋಗ್ಯದಲ್ಲಿ ಏರುಪೇರಾದೀತು. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗಕ್ಕೆ ಸಂದರ್ಶನ ಕರೆಬರಲಿದೆ.ಮಿಥುನ: ಕಾರ್ಯಬಾಹುಳ್ಯದಿಂದಾಗಿ ಅಂದುಕೊಂಡ ಹಾಗೆ ಪ್ರೀತಿ