Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 21 ನವೆಂಬರ್ 2020 (09:07 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
 

ಮೇಷ: ಕಾರ್ಯನಿಮಿತ್ತ ಕಿರು ಸಂಚಾರ ಮಾಡಬೇಕಾಗುತ್ತದೆ. ಮನೆಗೆ ಹೊಸ ಅತಿಥಿಗಳ ಆಗಮನವಾಗಲಿದೆ. ನೂತನ ದಂಪತಿಗೆ ಪ್ರವಾಸ ಭಾಗ್ಯ. ಹಣಕಾಸಿನ ಮುಗ್ಗಟ್ಟಿನಿಂದಾಗಿ ಅಂದುಕೊಂಡ ಕೆಲಸಗಳನ್ನು ಮುಂದೂಡಬೇಕಾಗಬಹುದು.
 
ವೃಷಭ: ನಿಮ್ಮ ಧಾರಾಳತನವೇ ನಿಮಗೆ ಮುಳುವಾಬಹುದು. ಅಪರಿಚಿತರನ್ನು ಕಣ್ಮುಚ್ಚಿ ನಂಬಬೇಡಿ. ಆರೋಗ್ಯ ಭಾಗ್ಯ ಸುಧಾರಿಸುವುದು. ಕಳೆದುಕೊಂಡ ಸಂಬಂಧಗಳು ಮರಳಿ ಕೂಡಿಕೊಳ್ಳಲಿದ್ದು, ಮನಸ್ಸಿಗೆ ಸಂತಸವಾಗಲಿದೆ.
 
ಮಿಥುನ: ಕೌಟುಂಬಿಕ ಜವಾಬ್ಧಾರಿಗಳು ಹೆಚ್ಚಲಿವೆ. ಹಾಗಿದ್ದರೂ ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ಸಿಗದೇ ಬೇಸರಗೊಳ್ಳುವಿರಿ. ಕಷ್ಟದ ಸಮಯದಲ್ಲಿ ಬಂಧು ಮಿತ್ರರ ನೆರವು ಸಿಗಲಿದೆ. ಆರ್ಥಿಕವಾಗಿ ಸಮಾಧಾನಕರ ದಿನ.
 
ಕರ್ಕಟಕ: ಕುಲದೇವರ ದರ್ಶನ ಪಡೆದು ಹರಕೆ ತೀರಸುವಿರಿ. ಸಂತಾನ ಹೀನ ದಂಪತಿಗಳಿಗೆ ಶುಭ ಸೂಚಕ ಫಲ ಸಿಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.
 
ಸಿಂಹ: ಸಂಗಾತಿಯ ಅಗತ್ಯಗಳನ್ನು ಪೂರೈಸಲು ಹೆಚ್ಚಿನ ಧನವಿನಿಯೋಗ ಮಾಡಬೇಕಾಗುತ್ತದೆ. ಆದರೆ ಎಲ್ಲಕ್ಕಿಂತ ನೆಮ್ಮದಿಯೇ ಮುಖ್ಯ ಎನ್ನುವುದನ್ನು ಅರಿಯಿರಿ. ಇಷ್ಟು ದಿನ ಕಠಿಣವೆನಿಸಿದ್ದ ಕೆಲಸಗಳು ಇಂದು ಸುಲಭವಾಗಿ ನೆರವೇರಲಿದೆ.
 
 
ಕನ್ಯಾ: ಬಂಧುಮಿತ್ರರ ಅಸಮಾಧಾನಕ್ಕೆ ಕಾರಣವಾಗುವಿರಿ. ಮಾತಿನ ಮೇಲೆ ನಿಗಾ ಅಗತ್ಯ. ಬಂಡವಾಳ ಹೂಡಿಕೆ ಮಾಡಲು ಸಕಾಲ. ಆದರೆ ಎಚ್ಚರಿಕೆಯಿಂದಿರಿ. ಮನಸ್ಸಿಗೆ ಹಿಡಿಸಿದ ಸಂಗಾತಿ ಸಿಗಲಿದ್ದಾರೆ. ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ ಪಡೆಯುವರು.
 
ತುಲಾ: ನಿಮ್ಮ ನಿರ್ಧಾರ ಸಂಗಾತಿಯ ಅಸಮಾಧಾನಕ್ಕೆ ಕಾರಣವಾದೀತು. ಹಾಗಿದ್ದರೂ ಕುಟುಂಬದ ಕ್ಷೇಮದ ದೃಷ್ಟಿಯಿಂದ ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗುವುದು.
 
ವೃಶ್ಚಿಕ: ಮಕ್ಕಳ ಭವಿಷ್ಯಕ್ಕೆ ತಕ್ಕುದಾದ ಯೋಜನೆ ರೂಪಿಸುವಿರಿ. ಆದಾಯಕ್ಕೆ ನಾನಾ ಮಾರ್ಗಗಳು ಸಿಗಲಿದೆ. ಬಳಸುವುದರಲ್ಲಿ ಜಾಣತನ ಪ್ರದರ್ಶಿಸಬೇಕಷ್ಟೇ. ಸಂಗಾತಿಗೆ ಮನನೋಯಿಸುವ ಹಾಗೆ ನಡೆದುಕೊಳ್ಳಬೇಡಿ.
 
ಧನು: ಕೆಲಸ ಕಾರ್ಯಗಳ ಹೊಣೆಗಾರಿಕೆಯಿಂದ ಮನೆಯವರ ಮೇಲೆ ಕೂಗಾಡಿ ಅಸಮಾಧಾನಕ್ಕೊಳಗಾಗುವಿರಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ನಡೆಸಬೇಕು. ಉದ್ಯೋಗದಲ್ಲಿ ಸಹೋದ್ಯೋಗಿಗಳು ಕಿರಿ ಕಿರಿ ಮಾಡಬಹುದು. ತಾಳ್ಮೆ ಅಗತ್ಯ.
 
ಮಕರ: ಕೈಗೊಂಡ ಕಾರ್ಯದಲ್ಲಿ ವಿಘ್ನಗಳು ತೋರಿಬಂದು ಮನಸ್ಸಿಗೆ ಬೇಸರ ಮಾಡಿಕೊಳ್ಳುವಿರಿ. ಅನಿರೀಕ್ಷಿತವಾಗಿ ಸಿಗುವ ಹಳೆಯ ಮಿತ್ರನಿಂದ ಕಷ್ಟಗಳಿಗೆ ಪರಿಹಾರ ಸಿಗುವುದು. ಕುಲದೇವರ ಪ್ರಾರ್ಥನೆ ಮಾಡಿದರೆ ಶುಭಫಲ ಸಾಧ್ಯತೆ.
 
ಕುಂಭ: ಉದ್ಯೋಗ ನಿಮಿತ್ತ ವಿದೇಶ ಯಾನ ಸಾಧ್ಯತೆ. ಕೈಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳದಿದ್ದರೆ ಪಶ್ಚಾತ್ತಾಪ ಪಡಬೇಕಾದೀತು. ಆರ್ಥಿಕವಾಗಿ ಸುಧಾರಣೆ ಕಂಡುಬರುವುದು. ಹಿರಿಯರ ಆರೋಗ್ಯದ ಬಗ್ಗೆ ನಿಗಾ ವಹಿಸಿ.
 
ಮೀನ: ಇಷ್ಟಮಿತ್ರರೊಂದಿಗೆ ಪ್ರವಾಸ, ಭೋಜನ ಮಾಡುವಿರಿ. ಇದರಿಂದ ಮನಸ್ಸಿಗೂ ಸಂತೋಷವಾಗಲಿದೆ. ಎಷ್ಟೋ ದಿನದಿಂದ ಕಷ್ಟ ಅಂದುಕೊಂಡು ಬಾಕಿಯಾಗಿದ್ದ ಕೆಲಸಗಳಿಗೆ ಇಂದು ದೈವಾನುಗ್ರಹದಿಂದ ಚಾಲನೆ ದೊರೆಯಲಿದೆ.
ಇದರಲ್ಲಿ ಇನ್ನಷ್ಟು ಓದಿ :