Widgets Magazine

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 22 ನವೆಂಬರ್ 2020 (08:58 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ನಿಮ್ಮ ದುಡುಕು ನಿರ್ಧಾರಗಳಿಂದ, ಮಾತಿನಿಂದ ಅನಾಹುತವಾದೀತು. ತಾಳ್ಮೆ, ಸಂಯಮ ಅಗತ್ಯ. ಕಷ್ಟಪಟ್ಟಿದ್ದಕ್ಕೆ ತಕ್ಕ ಫಲ ಸಿಗಲಿದೆ. ದೇಹಾರೋಗ್ಯದಲ್ಲಿ ಏರುಪೇರಾಗಿ ಆತಂಕಕ್ಕೆ ಕಾರಣವಾದೀತು. ಕಿರು ಓಡಾಟ ನಡೆಸುವಿರಿ.
 
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಬರುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಗ್ಗೆ ಹೆಚ್ಚು ಚಿಂತೆ ಮಾಡಬೇಕಿಲ್ಲ. ನಿಮ್ಮ ಶತ್ರುಗಳ ಬಗ್ಗೆ ಎಚ್ಚರವಾಗಿದ್ದರೆ ಸಾಕು. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳು ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆಯಿರಲಿದೆ.
 
ಮಿಥುನ: ನೂತನ ಯೋಜನೆಗೆ ಚಾಲನೆ ನೀಡಲು ಬೇಕಾದ ಎಲ್ಲಾ ತಯಾರಿಗಳನ್ನೂ ಮಾಡಲಿದ್ದೀರಿ. ಆಪ್ತರೊಂದಿಗೆ ನಿಮ್ಮ ದುಃಖ ಹಂಚಿಕೊಂಡು ಮನಸ್ಸು ಹಗುರವಾಗಿಸಲಿದ್ದೀರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಒಳಿತು.
 
ಕರ್ಕಟಕ: ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ತೋರಿಬರಲಿವೆ. ನಿರುದ್ಯೋಗಿಗಳಿಗೆ ತಮ್ಮ ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಸಿಗಲಿದೆ. ಸ್ವಯಂ ವೃತ್ತಿಯವರಿಗೆ ಆರ್ಥಿಕವಾಗಿ ಲಾಭವಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಪೂರಕವಾದ ವಾತಾವರಣ ಕಂಡುಬರಲಿದೆ. ಮಹಿಳೆಯರಿಗೆ  ಚಿನ್ನಾಭರಣ ಖರೀದಿ ಮಾಡುವ ಕನಸು ಸದ್ಯದಲ್ಲೇ ನನಸಾಗಲಿದೆ. ಹಿರಿಯರ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ. ದೇವತಾ ಪ್ರಾರ್ಥನೆ ಮರೆಯದಿರಿ.
 
ಕನ್ಯಾ: ಆರೋಗ್ಯ ಸಂಬಂಧಿತ ಬಹುದಿನಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಹಣಕಾಸಿನ ಮುಗ್ಗಟ್ಟು ಎದುರಾದೀತು. ಆದರೂ ತಾಳ್ಮೆಗೆಡಬೇಡಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ.
 
ತುಲಾ: ಹೊಸ ಮನೆ, ಭೂಮಿ ಖರೀದಿಯ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಮುನ್ನಡೆ ಸಿಗಲಿದೆ. ಹಿರಿಯರು ದಾನ ಧರ್ಮಾದಿ ಕೆಲಸಗಳಿಂದ ನೆಮ್ಮದಿ ಪಡೆಯಲಿದ್ದಾರೆ.
 
ವೃಶ್ಚಿಕ: ಅನಿರೀಕ್ಷಿತವಾಗಿ ಎದುರಾಗುವ ಖರ್ಚು ವೆಚ್ಚಗಳಿಗೆ ಇಂದೇ ಯೋಜನೆ ರೂಪಿಸಿಡುವುದು ಉತ್ತಮ. ಬಂಧು ಮಿತ್ರರ ಆಗಮನವಾಗಲಿದ್ದು, ಮನೆಯಲ್ಲಿ ಸಂತಸದ ವಾತಾವರಣವಿರಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರ ಕಂಕಣ ಬಲ ಕೂಡಿಬರುವುದು.
 
ಧನು: ದೇಹಾರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಲಿದ್ದು, ಚಿಂತೆ ಬೇಕಾಗಿಲ್ಲ. ಕಿರಿಯರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಹಿತಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ. ಖರ್ಚು ವೆಚ್ಚದ ಬಗ್ಗೆ ಹಿಡಿತವಿದ್ದರೆ ಉತ್ತಮ.
 
ಮಕರ: ಭೂ ಖರೀದಿ ಸಂಬಂಧವಾಗಿ ಅಲೆದಾಡಬೇಕಾದೀತು. ಸರಕಾರಿ ಲೆಕ್ಕಪತ್ರಗಳನ್ನು ಜೋಪಾನವಾಗಿಟ್ಟುಕೊಳ್ಳಿ. ಉದ್ಯೋಗ ಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆಗಳಿಗೆ ಕ್ರಿಯಾತ್ಮಕವಾಗಿ ಯೋಚಿಸಿ ಪರಿಹಾರ ಕಂಡುಕೊಳ್ಳಿ.
 
ಕುಂಭ: ಆಗಾಗ ವಿಘ್ನಗಳು ಎದುರಾದರೂ ನೀವು ಅಂದುಕೊಂಡ ಕೆಲಸಗಳು ನೆರವೇರಿಸಲು ತೊಂದರೆಯಾಗದು. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ. ನೀವು ಮಾಡಿದ ಒಳ್ಳೆಯ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದು.
 
ಮೀನ: ಮಕ್ಕಳ ದೇಹಾರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದು ಉತ್ತಮ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲು ಮನಸ್ಸು ಹಾತೊರೆಯುವುದು. ಯೋಗ್ಯ ವಯಸ್ಕರಿಗೆ ತಕ್ಕ ವಿವಾಹ ಪ್ರಸ್ತಾಪಗಳು ಬಂದೀತು. ಎಚ್ಚರಿಕೆಯಿಂದ ಮುಂದೆ ಹೆಜ್ಜೆಯಿಡಿ.
ಇದರಲ್ಲಿ ಇನ್ನಷ್ಟು ಓದಿ :