ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಎಲ್ಲವೂ ನೀವಂದುಕೊಂಡಂತೆಯೇ ಕೆಲಸಗಳು ನಡೆದೀತು. ಆದರೆ ನೀವು ನಿರೀಕ್ಷಿಸಿದ ವ್ಯಕ್ತಿಯಿಂದ ನಿರಾಸೆ ಎದುರಿಸಬೇಕಾದೀತು. ಸಂಗಾತಿಯ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.ವೃಷಭ: ಸಂಗಾತಿಯೊಂದಿಗೆ ಹೊಂದಿಕೊಂಡು ಬಾಳುವುದು ತುಂಬಾ ಮುಖ್ಯ. ಸಂಬಂಧಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮೇಲೆ ಮೇಲಧಿಕಾರಿಗಳಿಗೆ ಅತಿಯಾದ ಭರವಸೆ ಇರುವುದು. ವಿಶ್ವಾಸ ಉಳಿಸಿಕೊಳ್ಳಿ.ಮಿಥುನ: ಯಾವುದೇ ವಿಚಾರವಾದರೂ ಆತುರದ ನಿರ್ಧಾರ ಕೈಗೊಳ್ಳಲು ಹೋದರೆ