ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಯೋಚಿಸಿ ಮುಂದಡಿಯಿಡುವುದರಿಂದ ಹಿಂದೆ ಮಾಡಿದ ತಪ್ಪುಗಳು ಪುನಾವರ್ತನೆಯಾಗುವ ಸಾಧ್ಯತೆ ಕಡಿಮೆಯಾಗಲಿದೆ. ವಿಶೇಷ ವ್ಯಕ್ತಿಗಳ ಭೇಟಿಯಿಂದ ಹೊಸ ಯೋಜನೆಗಳು ಹೊಳೆಯಲಿವೆ. ದೇವರ ಪ್ರಾರ್ಥನೆ ಮರೆಯದಿರಿ.ವೃಷಭ: ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳುವವರಿರುತ್ತಾರೆ. ಎಚ್ಚರಿಕೆಯಿಂದ ಹೆಜ್ಜೆಯಿಡಿ. ನೆರೆಹೊರೆಯವರ ಚಾಡಿಮಾತುಗಳಿಗೆ ಕಿವಿಗೊಡಬೇಕಾಗಿಲ್ಲ. ಹಿರಿಯರಿಗೆ ಆರೋಗ್ಯ ಸಂಬಂಧೀ ಚಿಂತೆ ಕಾಡಲಿದೆ.ಮಿಥುನ: ಹಿಂದೆ ಮಾಡಿದ ಒಳ್ಳೆಯ ಕೆಲಸಗಳ ಪುಣ್ಯ ಇಂದು ಸಿಗಲಿದೆ. ಮೆಚ್ಚಿನ ವ್ಯಕ್ತಿಗಳ ಭೇಟಿ ಮನಸ್ಸಿಗೆ