ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಮಂಗಳವಾರ, 8 ಡಿಸೆಂಬರ್ 2020 (08:56 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 


ಮೇಷ: ಸಾಂಸಾರಿಕವಾಗಿ ನಿಮ್ಮ ಚಿಂತೆಗಳಿಗೆ ಕೊನೆಯೇ ಇಲ್ಲವೇನೋ ಅನಿಸಬಹುದು. ಆದರೆ ಆಪ್ತರೊಂದಿಗೆ ನಿಮ್ಮ ಮನಸ್ಸಿನ ದುಃಖ ಹಂಚಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಉನ್ನತಿಯ ಯೋಗವಿದೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ.
 
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆ ಬಯಸಿ ನೀವು ಮಾಡುವ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ಆರ್ಥಿಕವಾಗಿ ಹೊಸ ಯೋಜನೆಗಳಿಗೆ ಕೈಹಾಕಲಿದ್ದೀರಿ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರವಾಗಿರಬೇಕು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ಮಿಥುನ: ಹೊಸ ಮಿತ್ರರನ್ನು ಸಂಪಾದಿಸಲಿದ್ದೀರಿ. ನಿಮ್ಮ ವಿನೂತನ ಪ್ರಯತ್ನಗಳಿಗೆ ಸಂಗಾತಿಯ ಸಹಕಾರ ಸಿಗಲಿದೆ. ವೃತ್ತಿರಂಗದಲ್ಲಿ ಮುನ್ನಡೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಕಠಿಣ ಪ್ರಯತ್ನ ಅಗತ್ಯ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.
 
ಕರ್ಕಟಕ: ಅಗತ್ಯ ಬಂದಾಗ ಮಾತ್ರ ಹಣ ಖರ್ಚು ಮಾಡುವ ಸದ್ಭುದ್ಧಿ ಬೆಳೆಸಿಕೊಳ್ಳಿ. ಭವಿಷ್ಯದ ಯೋಜನೆಗಳಿಗೆ ರೂಪುರೇಷೆ ಹಾಕಿಕೊಳ್ಳಲಿದ್ದೀರಿ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವ ಯೋಗವಿದೆ. ಇಷ್ಟಮಿತ್ರರ ಭೇಟಿಯಾಗುವ ಯೋಗವಿದೆ.
 
ಸಿಂಹ: ಕಷ್ಟ ನಷ್ಟಗಳು ಇಂದು ಸಮನಾಗಿರಲಿದೆ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಒಳಿತಾಗುವುದು. ರಾಜಕೀಯ ರಂಗದಲ್ಲಿರುವವರಿಗೆ ಸ್ಥಾನಮಾನಕ್ಕಾಗಿ ಸಂಘರ್ಷ ನಡೆಸಬೇಕಾಗುತ್ತದೆ. ದೇವತಾ ಪ್ರಾರ್ಥನೆ ಮಾಡಿ.
 
ಕನ್ಯಾ: ಇಷ್ಟು ದಿನ ಬಯಸುತ್ತಿದ್ದ ವಸ್ತು, ವ್ಯಕ್ತಿಗಳು ನಿಮ್ಮ ಕೈ ಸೇರಲಿದೆ. ನಿರುದ್ಯೋಗಿಗಳಿಗೆ ಬಯಸಿದ ಉದ್ಯೋಗ ಸಿಗಲಿದ್ದು, ಮನಸ್ಸಿಗೆ ಸಂತಸವಾಗಲಿದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಂಗಾತಿಯೊಂದಿಗೆ ಪರಾಮರ್ಶಿಸಿ.
 
ತುಲಾ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಜೀವನದಲ್ಲಿ ಇದ್ದುದನ್ನು ಇದ್ದ ಹಾಗೇ ಎದುರಿಸುವ ಮನಸ್ಥಿತಿ ರೂಪಿಸಿಕೊಳ್ಳಿ. ವ್ಯವಹಾರದಲ್ಲಿ ಆರ್ಥಿಕವಾಗಿ ಲಾಭವಾಗದಿದ್ದರೂ ನಷ್ಟವಾಗದು. ಅನಗತ್ಯ ಚಿಂತೆ ಬೇಡ.
 
ವೃಶ್ಚಿಕ: ನೀವು ಇಂದು ಅದೃಷ್ಟಶಾಲಿಗಳಾಗಿದ್ದು, ಅಂದುಕೊಂಡ ಕೆಲಸಗಳು ಹೂವಿನಷ್ಟೇ ಹಗುರವಾಗಿ ನೆರವೇರಲಿದೆ. ನೂತನ ದಂಪತಿಗಳಿಗೆ ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಬೇರೆಯವರ ಮಾತುಗಳಿಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ.
 
ಧನು: ವೈಯಕ್ತಿಕವಾಗಿ ಕೆಲವೊಂದು ದೃಢ ನಿರ್ಧಾರ ಕೈಗೊಳ್ಳುವ ಸಮಯವಿದು. ಸಂಗಾತಿಯ ಸಲಹೆಗಳನ್ನು ಪಾಲಿಸಿ. ಮಕ್ಕಳ ವಿಚಾರದಲ್ಲಿ ಸಂತಸದ ವಾರತೆ ಸಿಗಲಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು.
 
ಮಕರ: ಎಷ್ಟೋ ದಿನದಿಂದ ಅರ್ಧಕ್ಕೇ ನಿಂತಿದ್ದ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ಭೂ, ವಾಹನ ಖರೀದಿಗೆ ಇದು ಸಕಾಲ. ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದೆ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ.
 
ಕುಂಭ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ನಿರೀಕ್ಷಿತ ಫಲ ಸಿಗಲಿದೆ. ನಿಮ್ಮ ಕಾರ್ಯಸಾಧನೆಗೆ ಮಿತ್ರರ ಸಹಾಯ ಸಿಗಲಿದೆ. ಕುಟುಂಬ ವರ್ಗದವರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆಯಿರಲಿದೆ. ಅನಗತ್ಯ ಚಿಂತೆ ಬೇಡ.
 
ಮೀನ: ಹಣಕಾಸಿನ ವ್ಯವಹಾರದ ಬಗ್ಗೆ ಎಚ್ಚರಿಕೆ ಅಗತ್ಯ. ಅಪರಿಚಿತರನ್ನು ನಂಬಿ ಹೂಡಿಕೆ ಮಾಡಲು ಹೋಗಬೇಡಿ. ನಿಮ್ಮ ತಾಳ್ಮೆ ಪರೀಕ್ಷೆಯಾಗುವ ಘಟನೆಗಳು ನಡೆದೀತು. ಮಹಿಳೆಯರಿಗೆ ತವರಿನ ಕಡೆಯವರ ಭೇಟಿಯಾಗುವ ಯೋಗವಿದೆ.


ಇದರಲ್ಲಿ ಇನ್ನಷ್ಟು ಓದಿ :