ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 12 ಡಿಸೆಂಬರ್ 2020 (08:47 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ನೀವು ಮಾಡುವ ಜನಪ್ರಿಯ ಕೆಲಸಗಳು ನಿಮಗೆ ಕೀರ್ತಿ ತಂದುಕೊಡಲಿದೆ. ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಉನ್ನತ ಸ್ಥಾನಕ್ಕೇರುವ ಯೋಗ. ದೇಹಾರೋಗ್ಯ ಕೈಕೊಟ್ಟೀತು. ಆರೈಕೆ ಮಾಡಿಕೊಳ್ಳಿ. ಸಂಗಾತಿಯ ಸಹಕಾರ ಸಿಗಲಿದೆ.
 
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಬಡ್ತಿ ಪಡೆಯಲು ನೀವು ಪಡುತ್ತಿದ್ದ ಪ್ರಯತ್ನಕ್ಕೆ ಫಲ ಸಿಗುವುದು. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದ್ದು, ಹೊಸ ಕೆಲಸಗಳಿಗೆ ಕೈ ಹಾಕಲಿದ್ದೀರಿ. ಹಿರಿಯರಿಗೆ ಪುಣ್ಯಕ್ಷೇತ್ರಗಳ ಸಂದರ್ಶನ ಯೋಗವಿದೆ.
 
ಮಿಥುನ: ನಿಮ್ಮ ಒದ್ದಾಟ, ಗೊಂದಲದ ಮನಸ್ಥಿತಿಗೆ ವಿರಾಮ ನೀಡಲಿದ್ದೀರಿ. ಮಾನಸಿಕ ಗೊಂದಲಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಲಿದ್ದೀರಿ. ಪ್ರೇಮಿಗಳಿಗೆ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ತಾಳ್ಮೆಯಿರಲಿ.
 
ಕರ್ಕಟಕ: ಆರ್ಥಿಕ ಸಂಕಷ್ಟಗಳಿಗೆ ಒಂದು ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲಿದ್ದೀರಿ. ಹೊಸ ವ್ಯವಹಾರಗಳಿಗೆ ಕೈ ಹಾಕಲು ಇದು ಸಕಾಲ. ಗೃಹಸಂಬಂಧೀ ವಸ್ತುಗಳ ಖರೀದಿ ಮಾಡಲಿದ್ದೀರಿ. ನಿಮ್ಮ ಕೆಲಸಗಳು ಸಂಗಾತಿಯ ಖುಷಿಗೆ ಕಾರಣವಾಗಲಿದೆ.
 
ಸಿಂಹ: ರಾಜಕೀಯ ವರ್ಗದವರಿಗೆ ಮುನ್ನಡೆಯ ಯೋಗವಿದೆ. ನೀವು ನಿರೀಕ್ಷಿಸುತ್ತಿದ್ದ ಕೆಲಸಗಳು ಅಚಾನಕ್ ಆಗಿ ನಡೆದುಹೋಗಲಿವೆ. ಯೋಗ್ಯ ವಯಸ್ಕರಿಗೆ ಸೂಕ್ತ ಸಂಬಂಧಗಳು ಕೂಡಿಬರಲಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ಎಲ್ಲವೂ ನೀವು ಬಯಸಿದಂತೇ ನಡೆಯಲಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಅವಕಾಶಗಳು ಒದಗಿಬರಲಿವೆ. ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಕೊಂಚ ಮಿತಿಯಿರಲಿ. ದೇವತಾ ಪ್ರಾರ್ಥನೆ ಮಾಡಿ.
 
ತುಲಾ: ಮನಸ್ಸಿಗೆ ಹಿಡಿಸಿದವರ ಬಳಿ ನಿಮ್ಮ ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲಿದ್ದೀರಿ. ಮನೆಯ ಗೃಹಿಣಿಯ ನಿರ್ಧಾರಗಳು ನಿಮಗೆ ಅಸಮಾಧಾನವುಂಟು ಮಾಡೀತು. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಸಂಯಮವಿರಲಿ.
 
ವೃಶ್ಚಿಕ: ಕಷ್ಟದಲ್ಲಿರುವ ಮಿತ್ರರಿಗೆ ಸಹಾಯ ಮಾಡಲಿದ್ದೀರಿ. ನಿಮ್ಮಿಂದ ಹಿಂದೆ ಉಪಕಾರ ಪಡೆದವರು ಇಂದು ನೆರವಿಗೆ ಬರಲಿದ್ದಾರೆ. ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾದೀತು. ಅನಗತ್ಯ ಚಿಂತೆ ಬೇಡ.
 
ಧನು: ಬೇಡದ ಯೋಚನೆಗಳು ಕಾಡಿ ನಿಮ್ಮ ಮನಸ್ಸಿನ ನೆಮ್ಮದಿ ಹಾಳುಮಾಡೀತು. ಬೇರೆಯವರ ಮಾತುಗಳಿಗೆ ಅತಿಯಾಗಿ ತಲೆಕೆಡಿಸಿಕೊಳ್ಳುವುದನ್ನು ಬಿಡಿ. ಅನಿರೀಕ್ಷಿತ ಅತಿಥಿಯ ಸ್ವಾಗತಕ್ಕೆ ಸಿದ್ಧರಾಗಬೇಕಾಗುತ್ತದೆ. ಆರೋಗ್ಯದಲ್ಲಿ ಸುಧಾರಣೆಯಾಗುವುದು.
 
ಮಕರ: ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಬಹುದಿನಗಳ ನಂತರ ನಿಮ್ಮ ಕನಸೊಂದು ನನಸಾಗಲಿದೆ. ವಾಹನ ಖರೀದಿ ಯೋಗ ಸದ್ಯದಲ್ಲೇ ಕೂಡಿಬರಲಿದೆ. ಸಾಲಗಾರರ ಕಾಟದಿಂದ ಮುಕ್ತರಾಗುವಿರಿ.
 
ಕುಂಭ: ಯಾವುದೇ ವಿಚಾರದ ಬಗ್ಗೆಯಾದರೂ ನಿಮ್ಮಷ್ಟಕ್ಕೇ ಕೊರಗಿಕೊಂಡು ಬವಣೆ ಪಡುವುದನ್ನು ಬಿಡಿ. ನಿಮ್ಮ ಕಷ್ಟಗಳಿಗೆ ಸಂಗಾತಿಯ ಸಾಂತ್ವನ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಗೆ ಅವಕಾಶಗಳು ತೋರಿಬಂದೀತು. ಬಳಸಿಕೊಳ್ಳಿ.
 
ಮೀನ: ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗಾವಕಾಶಗಳು ದೊರೆಯದೇ ನಿರಾಸೆಯಾದೀತು. ಆದರೆ ಸ್ವಯಂ ವೃತ್ತಿಯವರಿಗೆ ಲಾಭ ಕಂಡುಬಂದೀತು. ನಿಶ್ಚಯಿಸಿದ್ದ ಶುಭ ಮಂಗಲ ಕಾರ್ಯಗಳನ್ನು ಅನಿವಾರ್ಯವಾಗಿ ಮುಂದೂಡಬೇಕಾದೀತು. ತಾಳ್ಮೆಗೆಡಬೇಡಿ.
ಇದರಲ್ಲಿ ಇನ್ನಷ್ಟು ಓದಿ :