ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ನೀವು ಮಾಡಿದ ತಪ್ಪಿಗೆ ನೀವೇ ಬೆಲೆ ತೆರಬೇಕಾಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಹೆಸರು, ಪ್ರತಿಷ್ಠೆ ಹೆಚ್ಚಲಿದೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಆದರೆ ಭವಿಷ್ಯದ ದೃಷ್ಟಿಯಿಂದ ಕೆಲವು ಯೋಜನೆ ಹಾಕಿಕೊಳ್ಳುವುದು ಉತ್ತಮ.ವೃಷಭ: ವ್ಯವಹಾರದಲ್ಲಿ ಇದುವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಲಿದೆ. ಮನೆಗೆ ಹೊಸ ಅತಿಥಿಗಳ ಆಗಮನದಿಂದ ಸಂತಸವಾಗಲಿದೆ. ಅತಿಯಾಗಿ ಹೊಗಳುವವರನ್ನು ನಂಬಲು ಹೋಗಬೇಡಿ. ಭವಿಷ್ಯದ ಭದ್ರತೆಗೆ ಕೆಲವು ನಿರ್ಧಾರ