ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 14 ಜನವರಿ 2021 (09:11 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಕಾರ್ಯದೊತ್ತಡ ಅಧಿಕವಾಗಲಿದ್ದು, ನಿಮ್ಮ ಕೋಪ ತಾಪಗಳೂ ಹೆಚ್ಚಾಗಲಿವೆ! ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಹೊಮದಾನಿಕೆ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಿ.
 
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮಾತು ಕೇಳುವವರಿಲ್ಲದೇ ಅಸಹನೆಯಾದೀತು. ತಾಳ್ಮೆ, ಸಂಯಮ ಅಗತ್ಯ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಲಿದ್ದೀರಿ.
 
ಮಿಥುನ: ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಎಲ್ಲವೂ ನೀವಂದುಕೊಂಡಂತೇ ನಡೆಯಲಿದೆ. ವ್ಯಾವಹಾರಿಕವಾಗಿ ಲಾಭದಾಯಕ ದಿನಗಳು. ಆದರೆ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ.
 
ಕರ್ಕಟಕ: ನ್ಯಾಯಾಲಯದ ಕಲಾಪಗಳಲ್ಲಿ ಮುನ್ನಡೆ ಒದಗಿಬರಲಿದೆ. ಸರಕಾರಿ ಲೆಕ್ಕಪತ್ರಗಳನ್ನು ಎಚ್ಚರಿಕೆಯಿಂದಿರಿಸಿಕೊಳ್ಳಿ. ದೈವಾನುಕೂಲದಿಂದ ಅಂದುಕೊಂಡ ಕೆಲಸಗಳನ್ನು ಪೂರ್ತಿ ಮಾಡಲಿದ್ದೀರಿ. ಕಾರ್ಯನಿಮಿತ್ತ ಕಿರು ಸಂಚಾರ ಮಾಡಲಿದ್ದೀರಿ.
 
ಸಿಂಹ: ಗೃಹ ನಿರ್ಮಾಣ ಅಥವಾ ಕಟ್ಟಡ ಕಾಮಗಾರಿ ಕೆಲಸಗಳು ಅರ್ಧಕ್ಕೇ ಸ್ಥಗಿತಗೊಳ್ಳಲಿವೆ. ಗೃಹೋಪಯೋಗಿ ವಸ್ತುಗಳಿಗೆ ಖರ್ಚು ವೆಚ್ಚಗಳಾಗಲಿವೆ. ನಿಕಟವರ್ತಿಗಳಿಗೆ ಸಹಾಯ ಮಾಡಲಿದ್ದೀರಿ. ಸಂಗಾತಿಯೊಂದಿಗೆ ಹೊಂದಾಣಿಕೆ ಅಗತ್ಯ.
 
ಕನ್ಯಾ: ಮಹಿಳೆಯರು ನೆರೆಹೊರೆಯವರೊಂದಿಗೆ ಕಲಹವಾಗದಂತೆ ಎಚ್ಚರಿಕೆ ವಹಿಸಬೇಕು. ಮಾತಿನ ಮೇಲೆ ನಿಗಾ ಇರಲಿ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ರಂಗದಲ್ಲಿ ಹೊಸ ವಾತಾವರಣಕ್ಕೆ ಹೊಂದಿಕೊಳ‍್ಳುವುದು ಕಷ್ಟವಾಗಲಿದೆ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ.
 
ತುಲಾ: ಪಾಲು ಬಂಡವಾಳ ಹೂಡಿಕೆ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲಿದ್ದೀರಿ. ದಾಯಾದಿಗಳೊಂದಿಗೆ ಕಲಹವಾಗದಂತೆ ಎಚ್ಚರಿಕೆ ವಹಿಸಿ.
 
ವೃಶ್ಚಿಕ: ಉದರ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಲಿದೆ. ನಿಮ್ಮ ವಿಶ್ವಾಸಕ್ಕೆ ದ್ರೋಹ ಮಾಡುವವರಿರುತ್ತಾರೆ. ಎಚ್ಚರಿಕೆಯಿಂದಿರಿ. ಕೃಷಿಕರಿಗೆ ವ್ಯವಹಾರದಲ್ಲಿ ಮುನ್ನಡೆಯ ಯೋಗವಿದೆ. ಕುಲದೇವರ ಪ್ರಾರ್ಥನೆ ಮಾಡಿ.
 
ಧನು: ರಾಜಕೀಯ ವರ್ಗದವರಿಗೆ ಮುನ್ನಡೆಯ ಯೋಗವಿದೆ. ಸರಕಾರಿ ನೌಕರರಿಗೆ ಕಾರ್ಯದೊತ್ತಡವಿರಲಿದೆ. ಅಧಿಕಾರಿ ವರ್ಗದವರೊಂದಿಗೆ ರಾಜೀ ಮನೋಭಾವ ಬೆಳೆಸಿಕೊಳ್ಳಿ. ದೂರ ಪ್ರಯಾಣಕ್ಕೆ ಸಿದ್ಧತೆ ನಡೆಸಲಿದ್ದೀರಿ.
 
ಮಕರ: ವೃತ್ತಿರಂಗದಲ್ಲಿ ಮೇಲಧಿಕಾರಿಗಳ ವಿಶ್ವಾಸ ಗಳಿಕೆ ಮಾಡಲಿದ್ದೀರಿ. ನಿಮ್ಮ ಸಮಸ್ಯೆಗಳನ್ನು ಕ್ರಿಯಾತ್ಮಕವಾಗಿ ಪರಿಹರಿಸಲಿದ್ದೀರಿ. ಹಿರಿಯರಿಗೆ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವ ಯೋಗವಿದೆ. ಇಷ್ಟ ಭೋಜನ ಪ್ರಾಪ್ತಿಯಾಗಲಿದೆ.
 
ಕುಂಭ: ಅವಿವಾಹಿತರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿವೆ. ಪ್ರೇಮಿಗಳಿಗೆ ಮನೆಯವರನ್ನು ಒಪ್ಪಿಸುವ ಸವಾಲು ಎದುರಾಗಲಿದೆ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ.
 
ಮೀನ: ದೀರ್ಘಕಾಲದಿಂದ ಕಾಡುತ್ತಿದ್ದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆಯ ಯೋಗವಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಚಿಂತೆ ಬೇಡ.
ಇದರಲ್ಲಿ ಇನ್ನಷ್ಟು ಓದಿ :