ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಶನಿವಾರ, 16 ಜನವರಿ 2021 (08:49 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ಹೆಂಡತಿ ಮಕ್ಕಳಿಂದ ಸಂತಸದ ವಿಚಾರಗಳು ಕೇಳಿಬರಲಿದೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ವೃಷಭ: ಮನೋಲ್ಲಾಸಕೊಡುವ ಕೆಲಸಗಳನ್ನು ಮಾಡಲಿದ್ದೀರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡುವುದರಿಂದ ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವೇರಲಿದೆ. ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
 
ಮಿಥುನ: ನಿಮ್ಮ ಬಗ್ಗೆ ಬೇರೆಯವರು ಏನು ಹೇಳುತ್ತಾರೋ ಎಂಬ ಅನಗತ್ಯ ಚಿಂತೆ ಮಾಡಬೇಡಿ. ಉದ್ಯೋಗ ಕ್ಷೇತ್ರದಲ್ಲಿ ಬರುವ ಸವಾಲುಗಳನ್ನು ಪರಿಹರಿಸಲು ಸಂಗಾತಿಯ ನೆರವು ಪಡೆಯಲಿದ್ದೀರಿ. ಕಿರು ಸಂಚಾರ ಮಾಡಲಿದ್ದೀರಿ.
 
ಕರ್ಕಟಕ: ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಧನವ್ಯಯ ಮಾಡಲಿದ್ದೀರಿ. ಜೀವನದಲ್ಲಿ ನಾನಾ ರೀತಿಯ ಏರುಪೇರುಗಳಿಗೆ ಮಾನಸಿಕವಾಗಿ ಸಿದ್ಧರಾಗಿ. ಕೌಟುಂಬಿಕವಾಗಿ ಭಿನ್ನಾಭಿಪ್ರಾಯಗಳಾಗದಂತೆ ಎಚ್ಚರಿಕೆ ವಹಿಸಿ.
 
ಸಿಂಹ: ಒಲ್ಲದ ವಿಚಾರಕ್ಕೆ ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ಕಟ್ಟಡ ಕಾಮಗಾರಿ ಕೆಲಸಗಳಿಗೆ ವಿಘ್ನಗಳು ಎದುರಾಗಲಿವೆ. ಆರೋಗ್ಯದಲ್ಲಿ ಸುಧಾರಣೆಯಾಗಲಿದ್ದು, ಅನಗತ್ಯ ಚಿಂತೆ ಬೇಡ.
 
ಕನ್ಯಾ: ನಿಮ್ಮ ಸಮೀಪವರ್ತಿಗಳು ನಿಮ್ಮ ಬಗ್ಗೆ ಇದುವರೆಗೆ ಹೊಂದಿದ್ದ ಅಭಿಪ್ರಾಯ ಬದಲಿಸುವ ರೀತಿಯಲ್ಲಿ ನಡೆದುಕೊಳ್ಳಲಿದ್ದೀರಿ. ಯಾವುದೇ ನಿರ್ಧಾರಕ್ಕೆ ಮೊದಲು ಸಂಗಾತಿಯ ಜೊತೆಗೆ ಪರಾಮರ್ಶಿಸಿ ಮುನ್ನಡೆಯಿರಿ.
 
ತುಲಾ: ನಿಮ್ಮ ಬಹುದಿನಗಳ ಕನಸು ನನಸಾಗಿಸಲು ಹೊರಡಲಿದ್ದೀರಿ. ಕಳೆದು ಹೋದ ವಸ್ತುಗಳ ಮರಳಿ ಕೈ ಸೇರಲಿವೆ. ಬಂಧು ಮಿತ್ರರ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿರಲಿದೆ. ವಿದ್ಯಾರ್ಥಿಗಳಿಗೆ ಮುನ್ನಡೆ ಕಂಡುಬರುವುದು.
 
ವೃಶ್ಚಿಕ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಪರಿಸರಕ್ಕೆ ವರ್ಗಾವಣೆಯಾಗುವ ಸಾಧ‍್ಯತೆಯಿದೆ. ಮೇಲಧಿಕಾರಿಗಳೊಂದಿಗೆ ಸಂಯಮದಿಂದ ವರ್ತಿಸಿ. ಮಾತಿನ ಮೇಲೆ ನಿಗಾ ಇರಲಿ. ನಿರುದ್ಯೋಗಿಗಳಿಗೆ ಆಕಸ್ಮಿಕ ಉದ್ಯೋಗಾವಕಾಶ ಸಿಗಲಿದೆ.
 
ಧನು: ಯೋಗ್ಯ ವಯಸ್ಕರಿಗೆ ಸೂಕ್ತ ವೈವಾಹಿಕ ಸಂಬಂಧಗಳು ಕೂಡಿಬರಲಿವೆ. ನಿಮ್ಮ ಒಂದು ಮಾತಿನಿಂದ ಆಪ್ತರ ಮನಸ್ಸಿಗೆ ನೋವುಂಟಾಗಬಹುದು. ಅನಗತ್ಯ ವಾದ ವಿವಾದ ಬೇಡ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಖರ್ಚು ಮಾಡಿ.
 
ಮಕರ: ಕೌಟುಂಬಿಕವಾಗಿ ಸಮಾಧಾನಕರ ವಾತಾವರಣವಿರಲಿದೆ. ಬಯಸದೇ ಕೆಲವೊಂದು ಅವಕಾಶಗಳು ತಾನಾಗಿಯೇ ಕೈಸೇರಲಿದೆ. ವಾಹನ ಸವಾರರು ಚಾಲನೆಯಲ್ಲಿ ಎಚ್ಚರಿಕೆ ವಹಿಸಬೇಕು. ಇಷ್ಟವಸ್ತುಗಳ ಖರೀದಿ ಮಾಡಲಿದ್ದೀರಿ.
 
ಕುಂಭ: ಕ್ರಯ-ವಿಕ್ರಯ ವ್ಯವಹಾರದಲ್ಲಿ ನಷ್ಟವಾದೀತು. ಹೂಡಿಕೆ ಮಾಡುವ ಮೊದಲು ಯೋಚಿಸಿ ಹೆಜ್ಜೆಯಿಡಿ. ಸ್ವಾಭಿಮಾನಕ್ಕೆ ಧಕ್ಕೆ ತರುವವರಿಂದ ದೂರವಿರುವುದೇ ಉತ್ತಮ. ಕೆಳಹಂತದ ನೌಕರರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿಯಿದೆ. ದೇವತಾ ಪ್ರಾರ್ಥನೆ ಮಾಡಿ.
 
ಮೀನ: ದೂರ ಸಂಚಾರದಲ್ಲಿ ಅಪಘಾತದ ಭಯ ಕಂಡುಬರಬಹುದು. ಮನೆಯಿಂದ ಹೊರಡುವ ಮೊದಲು ಕುಲದೇವರ ಪ್ರಾರ್ಥನೆ ಮಾಡಿ. ಹಿರಿಯರಿಗೆ ಧಾರ್ಮಿಕ ಕ್ಷೇತ್ರಗಳ ಸಂದರ್ಶನ ಯೋಗವಿದೆ. ಮಹಿಳೆಯರಿಗೆ ಗೃಹ ಕೃತ್ಯಗಳಿಂದ ಬಿಡುವು ಸಿಗಲಿದೆ.
ಇದರಲ್ಲಿ ಇನ್ನಷ್ಟು ಓದಿ :