ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಭಾನುವಾರ, 17 ಜನವರಿ 2021 (08:52 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಅನಿರೀಕ್ಷಿತವಾಗಿ ದೂರ ಪ್ರಯಾಣ ಮಾಡಬೇಕಾಗಿ ಬರಲಿದೆ. ಪ್ರಯಾಣದಲ್ಲಿ ಎಚ್ಚರವಿರಲಿ. ಮಕ್ಕಳ ದೇಹಾರೋಗ್ಯದ ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಸಂಬಂಧಗಳಲ್ಲಿ ಬಿರುಕು ಮೂಡದಂತೆ ಎಚ್ಚರಿಕೆ ವಹಿಸಿ. ಖರ್ಚು ವೆಚ್ಚದ ಬಗ್ಗೆ ನಿಗಾ ಇರಲಿ.
 
ವೃಷಭ: ಮನಸ್ಸಿಗೆ ಖುಷಿ ಕೊಡುವ ಕೆಲಸ ಮಾಡಲಿದ್ದೀರಿ. ನಿಮ್ಮ ಕ್ರಿಯಾತ್ಮಕ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸಾಧನೆಗಾಗಿ ಪ್ರಯತ್ನ ನಡೆಸಲಿದ್ದೀರಿ. ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ.
 
ಮಿಥುನ: ನಿಮ್ಮ ಪಾಲಿಗೆ ಇಂದಿನ ದಿನ ಸಂತೋಷದಾಯಕ ದಿನವಾಗಲಿದೆ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಮಹಿಳೆಯರಿಗೆ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರುವ ಅವಕಾಶ ಸಿಗಲಿದೆ. ಅವಕಾಶಗಳನ್ನು ಬಳಸಿಕೊಳ್ಳಿ.
 
ಕರ್ಕಟಕ: ಯಾವುದೇ ವಿಚಾರಕ್ಕಾದರೂ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ಸರಿಯಾಗಿ ಪರಾಮರ್ಶಿಸಿ. ಕಳೆದು ಹೋದ ವಸ್ತುಗಳ ಬಗ್ಗೆ ಚಿಂತೆ ಮಾಡುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಹೊಸ ಯೋಜನೆಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ.
 
ಸಿಂಹ: ನೀವು ಮಾಡುವ ಕೆಲಸದ ಬಗ್ಗೆ ಜನರೇನು ಅಂದುಕೊಳ್ಳುತ್ತಾರೋ ಎಂಬ ಚಿಂತೆಯಲ್ಲಿ ಹಿಂಜರಿಯಬೇಡಿ. ನಿಮ್ಮ ಪಾಲಿಗೆ ಬಂದ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಿ. ಕಿರು ಸಂಚಾರದ ಯೋಗ ಕೂಡಿಬರಲಿದೆ.
 
ಕನ್ಯಾ: ಉದ್ಯೋಗಾರ್ಥಿಗಳಿಗೆ ಅಧಿಕ ಓಡಾಟ ನಡೆಸಬೇಕಾಗುತ್ತದೆ. ವ್ಯವಹಾರದಲ್ಲಿ ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿರಲಿ. ಮೆಚ್ಚಿನ ವ್ಯಕ್ತಿಗಳನ್ನು ಬೇಟಿಯಾಗುವ ಯೋಗವಿದೆ. ಪ್ರೇಮಿಗಳು ತಮ್ಮ ಮನದಾಳವನ್ನು ಹಂಚಿಕೊಳ್ಳಲಿದ್ದಾರೆ.
 
ತುಲಾ: ನಿಮ್ಮ ಮನಸ್ಸಿನಲ್ಲಿರುವ ಚಿಂತನೆಗಳನ್ನು ಕಾರ್ಯರೂಪಕ್ಕೆ ತನ್ನಿ. ಯಾರಿಗೂ ಹೆದರುವ ಅಥವಾ ಹಿಂಜರಿಯುವ ಅಗತ್ಯವಿಲ್ಲ. ಹಿರಿಯರಿಂದ ನಿಮ್ಮ ಕೆಲಸಗಳಿಗೆ ಪ್ರಶಂಸೆ ಸಿಗಲಿದೆ. ದಾಯಾದಿ ಕಲಹಗಳು ಅಂತ್ಯವಾಗಲಿದೆ. ಚಿಂತೆ ಬೇಡ.
 
ವೃಶ್ಚಿಕ: ಹೊಸ ಜನರ ಭೇಟಿಯಾಗಲಿದ್ದೀರಿ. ಹಿರಿಯರಿಗೆ ಸಾಧು ಸಂತರ ಆಶೀರ್ವಾದ ಪಡೆಯುವ ಯೋಗ ಬರಲಿದೆ. ಆರ್ಥಿಕವಾಗಿ ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ಅನಗತ್ಯ ಚಿಂತೆ ಬೇಡ. ದೇವತಾ ಪ್ರಾರ್ಥನೆ ಮಾಡಿ.
 
ಧನು: ನಿಮ್ಮ ಕೆಲವೊಂದು ಮಾತುಗಳು ಕಿರಿಯರ ಮಾತಿಗೆ ನೋವುಂಟು ಮಾಡಲಿದೆ. ಮಾತಿನ ಮೇಲೆ ನಿಗಾ ಇರಲಿ. ಶಾಂತಿ ಸಮಾಧಾನದಿಂದಿರುವುದು ಮುಖ್ಯ. ದೇಹಾರೋಗ್ಯದ ಬಗ್ಗೆ ಅನಾದರಣೆ ಬೇಡ. ದಿನದಂತ್ಯಕ್ಕೆ ಅಚ್ಚರಿ ಸುದ್ದಿ ಕಾದಿದೆ.
 
ಮಕರ: ನಿಮ್ಮ ಮಾತು, ನಡತೆಯಿಂದ ಎಲ್ಲರ ಪ್ರೀತಿ, ಆದರಗಳಿಗೆ ಪಾತ್ರರಾಗಲಿದ್ದೀರಿ. ಯೋಗ್ಯ  ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಮಕ್ಕಳ ಭವಿಷ್ಯದ ಯೋಜನೆಗೆ ಸಹಕಾರ ನೀಡಿ.
 
ಕುಂಭ: ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ನಿಮ್ಮ ಪ್ರೀತಿ ಪಾತ್ರರ ಭೇಟಿಯಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಆರ್ಥಿಕವಾಗಿ ಹಣಕಾಸಿನ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕಾಗುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.
 
ಮೀನ: ಮೆಚ್ಚಿನ ಮನದೆನ್ನೆಯ ಬಹುದಿನಗಳ ಆಸೆ ಪೂರೈಸಲಿದ್ದೀರಿ. ವಾಹನದಲ್ಲಿ ಪ್ರಯಾಣ ಮಾಡುವಾಗ ಅಪಘಾತ ಭಯವಿದೆ. ಎಚ್ಚರಿಕೆಯಿರಲಿ. ಹಿರಿಯರಿಗೆ ದಾನ ಧರ್ಮಾದಿಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಇದರಲ್ಲಿ ಇನ್ನಷ್ಟು ಓದಿ :