ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 18 ಜನವರಿ 2021 (07:31 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.
 

ಮೇಷ: ದೂರ ಸಂಚಾರದಿಂದ ದೇಹಾಯಾಸವಾಗದಂತೆ ಎಚ್ಚರಿಕೆ ವಹಿಸಿ. ಪರಮಾಪ್ತರ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಮಕ್ಕಳ ವಿದ್ಯಾಭ‍್ಯಾಸದ ಕಡೆಗೆ ಗಮನಹರಿಸಬೇಕಾಗುತ್ತದೆ.
 
ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ವಿರೋಧಿಗಳಿಗೆ ಹಿನ್ನಡೆಯಾಗಲಿದೆ. ನಿಮ್ಮ ಕ್ರಿಯಾತ್ಮಕ ಕೆಲಸಗಳಿಗೆ ಜನಮನ್ನಣೆ ಸಿಗಲಿದೆ. ವ್ಯಾವಹಾರಿಕವಾಗಿ ಲಾಭ ಮಾಡಿಕೊಳ್ಳಲಿದ್ದೀರಿ. ವಾಹನ ಸವಾರರು ಎಚ್ಚರಿಕೆಯಿಂದಿರಬೇಕು.
 
ಮಿಥುನ: ಮಹಿಳೆಯರಿಂದ ನಿಮಗೆ ಇಂದು ಶುಭ ಯೋಗ ಭಾಗ್ಯ ಸಿಗಲಿದೆ. ನೀವು ಅಂದುಕೊಂಡ ಕೆಲಸಗಳು ಸುಗಮವಾಗಿ ನೆರವಾಗುವುದು. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಕಿರು ಸಂಚಾರ ಮಾಡಬೇಕಾಗುತ್ತದೆ.
 
ಕರ್ಕಟಕ: ವೈವಾಹಿಕ ಸಂಬಂಧಗಳಿಗಾಗಿ ಹುಡುಕಾಡುತ್ತಿರುವವರಿಗೆ ಯಶಸ್ಸು ಸಿಗುವುದು. ಹಿರಿಯರಿಗೆ ದೇಹಾರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾಗಬಹುದು. ಆದರೆ ಉಪೇಕ್ಷೆ ಬೇಡ. ಭೂ ಸಂಬಂಧೀ ವ್ಯಾಜ್ಯಗಳು ಪರಿಹಾರವಾಗಲಿದೆ.
 
ಸಿಂಹ: ನಿಮ್ಮ ನೆರೆಹೊರೆಯವರಿಂದಲೇ ನಿಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗಲಿದೆ. ನೀರು, ಬೆಂಕಿ ಜೊತೆ ಎಚ್ಚರಿಕೆಯಿಂದಿರಿ. ಸಾಮಾಜಿಕವಾಗಿ ಹೆಸರು ಮಾಡುವ ಯೋಗ ಕೂಡಿಬರುವುದು. ಕುಲದೇವರ ಪ್ರಾರ್ಥನೆ ಮಾಡಿ.
 
ಕನ್ಯಾ: ಕಲಿಕೆಯ ಹಾದಿಯಲ್ಲಿ ಎಲ್ಲವೂ ಕಷ್ಟವೆನಿಸಬಹುದು. ಆದರೆ ಮುಂದೆ ಸಿಗುವ ಯಶಸ್ಸಿಗಾಗಿ ಪರಿಶ್ರಮಪಡಲೇಬೇಕಾಗುತ್ತದೆ. ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮಕ್ಕಳ ಬೇಡಿಕೆ ಪೂರೈಸುವಿರಿ.
 
ತುಲಾ: ಪ್ರೀತಿ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವ ಯೋಗ ಕೂಡಿಬರುವುದು. ಇಷ್ಟಭೋಜನ ಪ್ರಾಪ್ತಿಯಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರವೇ ಕಂಕಣ ಭಾಗ್ಯ ಸಿಗಲಿದೆ. ವ್ಯಾಪಾರಿಗಳಿಗೆ ಮುನ್ನಡೆಯ ಯೋಗವಿದೆ. ಚಿಂತೆ ಬೇಡ.
 
ವೃಶ್ಚಿಕ: ಆರ್ಥಿಕವಾಗಿ ನಿಮ್ಮ ಸ್ಥಿತಿ ಗತಿ ಸುಧಾರಣೆಗೆ ನಾನಾ ಮಾರ್ಗಗಳನ್ನು ಹುಡಕಾಡಲಿದ್ದೀರಿ. ವೈಯಕ್ತಿಕ ಜೀವನದ ಬಗ್ಗೆ ಕೆಲವು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದ್ದೀರಿ.  ಕೈಗೆ ಬಂದ ತುತ್ತು ಬಾಯಿಗೆ ಬರದ ಸ್ಥಿತಿ ಎದುರಾದೀತು. ತಾಳ್ಮೆಯಿರಲಿ.
 
ಧನು: ಕೆಟ್ಟ ಯೋಚನೆಗಳು ಕಾಡಿಬಂದೀತು. ಕುಲದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಉತ್ತಮ. ಪ್ರೀತಿ ಪಾತ್ರರ ಭೇಟಿಯಾಗಲಿದ್ದೀರಿ. ಮನೆಯಲ್ಲಿ ವಿಶೇಷ ಭೋಜನ ತಯಾರಿ ಮಾಡಲಿದ್ದೀರಿ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಮಕರ: ಕೌಟುಂಬಿಕವಾಗಿ ಇಂದು ಖುಷಿಯ ದಿನ ನಿಮ್ಮದಾಗಲಿದೆ. ಅನಿರೀಕ್ಷಿತವಾಗಿ ಮನೆಗೆ ಅತಿಥಿಗಳ ಆಗಮನವಾಗಲಿದೆ. ಇಷ್ಟು ದಿನ ಕಾಯುತ್ತಿದ್ದ ವಸ್ತು ಖರೀದಿ ಮಾಡಲಿದ್ದೀರಿ. ಆದರೆ ಆರ್ಥಿಕವಾಗಿ ಖರ್ಚು ವೆಚ್ಚದ ಬಗ್ಗೆ ಮಿತಿಯಿರಲಿ.
 
ಕುಂಭ: ಬಯಸಿದ್ದು ಸಿಗದೇ ನಿರಾಸೆಯಾದೀತು. ಆದರೆ ನಿಮ್ಮ ಪ್ರೀತಿ ಪಾತ್ರರು ನಿಮ್ಮ ಕಷ್ಟಗಳಿಗೆ ಹೆಗಲು ಕೊಡಲಿದ್ದಾರೆ. ಸಂಗಾತಿಯ ಬಹುದಿನಗಳ ಕನಸು ನನಸಾಗಿಸಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಿರದು. ಆದರೆ ದುಂದು ವೆಚ್ಚ ಬೇಡ.
 
ಮೀನ: ಮನಸ್ಸಿಗೆ ಇಷ್ಟವಾದವರ ಜೊತೆ ಭಾವನೆ ಹಂಚಿಕೊಳ್ಳಲಿದ್ದೀರಿ. ನಿಮ್ಮ ಇಷ್ಟದ ಕೆಲಸಗಳ ಮಾಡುವುದರಿಂದ ಮನಸ್ಸಿಗೆ ಉಲ್ಲಾಸ ಸಿಗಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವುದು ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಇದರಲ್ಲಿ ಇನ್ನಷ್ಟು ಓದಿ :