ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಗುರುವಾರ, 21 ಜನವರಿ 2021 (08:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಉದ್ಯೋಗ ಕ್ಷೇತ್ರದಲ್ಲಿ ಬರುವಂತಹ ಸವಾಲುಗಳನ್ನು ಎದುರಿಸಲು ಸಿದ್ಧರಾಗಿ. ಕೌಟುಂಬಿಕವಾಗಿ ಹಿರಿಯರ ಸಲಹೆಗಳು ಅಪಥ್ಯವೆನಿಸಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ವೃಷಭ: ಹಿರಿಯರಿಗೆ ಶೀತ ಸಂಬಂಧೀ ಆರೋಗ್ಯ ಸಮಸ್ಯೆಗಳು ಕೇಳಿಬಂದೀತು. ವೃತ್ತಿರಂಗದಲ್ಲಿ ಮುನ್ನಡೆಯ ಅವಕಾಶಗಳಿಗೆ ಸಹೋದ್ಯೋಗಿಗಳಿಂದಲೇ ವಿಘ್ನಗಳು ಎದುರಾದೀತು. ತಾಳ್ಮೆ, ಸಂಯಮ ಅಗತ್ಯ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ಸಿಗಲಿದೆ.
 
ಮಿಥುನ: ಇಷ್ಟ ವಸ್ತುಗಳ ಖರೀದಿಗಾಗಿ ಖರ್ಚು ವೆಚ್ಚಗಳಾದೀತು. ಸಂಗಾತಿಗೆ ಅಚ್ಚರಿಯ ಉಡುಗೊರೆ ನೀಡಲಿದ್ದೀರಿ. ನೂತನ ದಂಪತಿಗಳಿಗೆ ಸಂತಾನ ಫಲ ಸೂಚನೆ ದೊರೆಯಲಿದೆ. ವ್ಯಾಪಾರಿಗಳು ಅಪರಿಚಿತರನ್ನು ನಂಬಿ ವ್ಯವಹಾರ ಮಾಡದಿರಿ.
 
ಕರ್ಕಟಕ: ವಿದ್ಯಾರ್ಥಿಗಳಿಗೆ ಮುನ್ನಡೆಗೆ ಸಹಕಾರಿಯಾಗುವ ಅವಕಾಶಗಳು ಒದಗಿಬರಲಿವೆ. ನಿರುದ್ಯೋಗಿಗಳು ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಮುನ್ನಡೆಯಬೇಕು. ವೈವಾಹಿಕ ಸಂಬಂಧಗಳನ್ನು ಎಚ್ಚರಿಕೆಯಿಂದ ನಿಭಾಯಿಸಿ.
 
ಸಿಂಹ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನಗಳು ವೃದ್ಧಿಯಾಗಲಿವೆ. ಮನೆಯ ಹಿರಿಯ ಸದಸ್ಯರ ಆರೋಗ್ಯದ
ಬಗ್ಗೆ ಕಾಳಜಿವಹಿಸಬೇಕಾಗುತ್ತದೆ. ಮನಸ್ಸಿಗೆ ಇಷ್ಟವಾದವರ ಜೊತೆ ಹೊತ್ತು ಕಳೆಯಲಿದ್ದೀರಿ. ಚಿಂತೆ ಬೇಡ.
 
ಕನ್ಯಾ: ನಿಮ್ಮ ಬೆನ್ನ ಹಿಂದೆ ಸಂಚು ನಡೆಸುವವರ ಪಿತೂರಿಗಳು ಬೆಳಕಿಗೆ ಬರಲಿವೆ. ವೃತ್ತಿರಂಗದಲ್ಲಿ ನಿಮ್ಮ ಏಳಿಗೆಯನ್ನು ತಡೆಯಲು ಯಾರಿಂದಲೂ ಸಾಧ‍್ಯವಿಲ್ಲ. ಹಣಕಾಸಿನ ಸಣ್ಣಪುಟ್ಟ ಅಚಡಣೆಗಳು ಕಂಡುಬಂದೀತು. ದೇವತಾ ಪ್ರಾರ್ಥನೆ ಮಾಡಿ.
 
ತುಲಾ: ಕಟ್ಟಡ ಕಾಮಗಾರಿ ಕೆಲಸಗಳಿಗೆ ಚಾಲನೆ ನೀಡಲು ಇಷ್ಟು ದಿನ ನೀವು ಕಾಯುತ್ತಿದ್ದ ಶುಭ ಗಳಿಗೆ ಕೂಡಿಬರಲಿದೆ. ಅವಿವಾಹಿತ ಕನ್ಯೆಯರಿಗೆ ಶೀಘ್ರದಲ್ಲೇ ಸೂಕ್ತ ಸಂಬಂಧ ಕೂಡಿಬರಲಿದೆ. ದೇಹಾರೋಗ್ಯದಲ್ಲಿ ಸುಧಾರಣೆಯಾಗಲಿದೆ.
 
ವೃಶ್ಚಿಕ: ನಿಮ್ಮ ಮನಸ್ಸಿನ ಬೇಸರ ಕಳೆಯಲು ಇಷ್ಟದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಕ್ರಿಯಾತ್ಮಕ ಕೆಲಸಗಳಿಂದ ಶಿಕ್ಷಕಕರ ಮೆಚ್ಚುಗೆಗೆ ಪಾತ್ರರಾಗಲಿದ್ದಾರೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ.
 
ಧನು: ಬೇರೆಯವರು ನಿಮ್ಮ ಬಗ್ಗೆ ಏನಂದುಕೊಳ್ಳುವರೋ ಎಂಬ ಯೋಚನೆಯಲ್ಲೇ ಕಾಲ ಕಳೆಯಲಿದ್ದೀರಿ. ನಿಮ್ಮ ಬಗ್ಗೆ ಕೀಳರಿಮೆ ಬಿಡಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಎಲ್ಲವೂ ಶುಭವಾಗುವುದು.
 
ಮಕರ: ಬೇರೆಯವರ ಕಷ್ಟಕ್ಕೆ ಸ್ಪಂದಿಸಲು ಹೋಗಿ ತೊಂದರೆಗೆ ಸಿಲುಕಿಕೊಳ್ಳದಿರಿ. ದಾಯಾದಿಗಳೊಂದಿಗಿನ ವೈಮನಸ್ಯಗಳು ತೀರಿಹೋಗಲಿವೆ. ಸರಕಾರಿ ನೌಕರರಿಗೆ ಕಾರ್ಯದೊತ್ತಡ ಅಧಿಕವೆನಿಸಬಹುದು. ಆದರೆ ಹಣಕಾಸಿನ ಹರಿವಿಗೆ ತೊಂದರೆಯಿರದು.
 
ಕುಂಭ: ಪ್ರೀತಿ ಪಾತ್ರರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಮೆಚ್ಚಿನ ವ್ಯಕ್ತಿಗಳ ಭೇಟಿ ನಿಮ್ಮ ಮನಸ್ಸಿಗೆ ಸಂತೋಷ ಹೆಚ್ಚಿಸಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚ ಮಾಡಲಿದ್ದೀರಿ. ಅನಗತ್ಯವೆನಿಸುವ ವಿಚಾರದ ಬಗ್ಗೆ ತಲೆಕೆಡಿಸಲು ಹೋಗಬೇಡಿ.
 
ಮೀನ: ವೈವಾಹಿಕ ಸಂಬಂಧದಲ್ಲಿ ಸಾಮರಸ್ಯ ಕಾಪಾಡಲು ಕಷ್ಟಪಡಬೇಕಾಗುತ್ತದೆ. ಅನಗತ್ಯ ಮಾತುಗಳಿಗೆ ಕಡಿವಾಣ ಹಾಕುವುದು ಉತ್ತಮ. ಮಹಿಳೆಯರಿಗೆ ಚಿನ್ನಾಭರಣ ಖರೀದಿ ಯೋಗವಿದೆ. ನೌಕರ ವರ್ಗದವರಿಗೆ ಲಾಭದಾಯಕ ದಿನ.
ಇದರಲ್ಲಿ ಇನ್ನಷ್ಟು ಓದಿ :