ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಕೌಟುಂಬಿಕವಾಗಿ ಹಲವು ವಿಚಾರಗಳು ನಿಮ್ಮನ್ನು ಚಿಂತೆಗೀಡುಮಾಡಲಿದೆ. ನಿಮಗಿಷ್ಟವಿಲ್ಲದೇ ಇದ್ದರೂ ಕೆಲವು ವಿಚಾರಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆರ್ಥಿಕವಾಗಿ ಭವಿಷ್ಯದ ದೃಷ್ಟಿಯಿಂದ ಯೋಜನೆ ರೂಪಿಸಬೇಕಾಗುತ್ತದೆ.ವೃಷಭ: ವೃತ್ತಿರಂಗದಲ್ಲಿ ಏರುಪೇರುಗಳಿಗೆ ಸಿದ್ಧರಾಗಬೇಕಾಗುತ್ತದೆ. ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಭಿನ್ನಾಭಿಪ್ರಾಯವಾದೀತು. ಹಿರಿಯರ ಮಧ್ಯಸ್ಥಿಕೆಯಿಂದ ಪರಿಹರಿಸಿಕೊಳ್ಳಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ಮಿಥುನ: ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ನಿಮ್ಮ ವೃತ್ತಿ ಜೀವನದ ತೊಡಕುಗಳು ನಿವಾರಣೆಯಾಗಲಿದೆ. ಸರಕಾರಿ ಉದ್ಯೋಗಿಗಳಿಗೆ ಸ್ಥಾನ ಪಲ್ಲಟವಾಗುವ ಸಾಧ್ಯತೆಯಿದೆ. ನಿರುದ್ಯೋಗಿಳಿಗೆ