ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.ಮೇಷ: ವಿದ್ಯಾರ್ಥಿಗಳಿಗೆ ತಾವು ಬಯಸಿದ ವಿಚಾರದಲ್ಲಿ ಉನ್ನತ ವ್ಯಾಸಂಗ ಮಾಡುವ ಅವಕಾಶಗಳು ದೊರೆಯಲಿವೆ. ಆರ್ಥಿಕವಾಗಿ ಹಣಕಾಸಿಗೆ ತೊಂದರೆಯಿರದು. ಆದರೆ ಇಷ್ಟವಸ್ತುಗಳನ್ನು ಖರೀದಿಸಲು ಅಡ್ಡಿ ಆತಂಕಗಳು ಎದುರಾಗಲಿವೆ.ವೃಷಭ: ವೃತ್ತಿರಂಗದಲ್ಲಿ ಪ್ರತಿಕೂಲ ವಾತಾವರಣದಿಂದಾಗಿ ನೀವಂದುಕೊಂಡ ಕೆಲಸಗಳು ನೆರವೇರದು. ಆದರೆ ತಾಳ್ಮೆ, ಸಂಯಮವಿರಲಿ. ನೆರೆಹೊರೆಯವರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆಯಿಂದಿರಿ. ಕಿರು ಸಂಚಾರ ಮಾಡಬೇಕಾಗುತ್ತದೆ.ಮಿಥುನ: ರಾಜಕೀಯ ರಂಗದಲ್ಲಿರುವವರಿಗೆ ಉನ್ನತ ಸ್ಥಾನಕ್ಕೇರುವ ಯೋಗವಿದೆ. ಸರಕಾರಿ ನೌಕರರಿಗೆ ನಿಮ್ಮ ಸ್ಥಾನವರ್ಧನೆಗೆ