ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ಮನೆಗೆ ಅನಿರೀಕ್ಷಿತ ಅತಿಥಿಗಳ ಆಗಮನವಾಗಲಿದೆ. ಗೃಹಿಣಿಯರಿಗೆ ಬಿಡುವಿಲ್ಲದ ಕೆಲಸ ಕಾರ್ಯಗಳಿರುತ್ತವೆ. ಅನಿರೀಕ್ಷಿತವಾಗಿ ಕೆಲವೊಂದು ಖರ್ಚು ವೆಚ್ಚಗಳಿಗೆ ಸಿದ್ಧರಾಗಬೇಕಾಗುತ್ತದೆ. ಕಿರು ಓಡಾಟ ನಡೆಸುವಿರಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮತನಕ್ಕೆ ಬೆಲೆ ಸಿಗದಂತಾದೀತು. ಆದರೆ ತಾಳ್ಮೆ, ಸಂಯಮ ಕಳೆದುಕೊಳ್ಳಬೇಡಿ. ಕೆಲವೊಂದು ಸಾರಿ ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ದೇಹಾರೋಗ್ಯದ ಬಗ್ಗೆ ಕಾಳಜಿಯಿರಲಿ.ಮಿಥುನ: ಹಿರಿಯರಿಗೆ ತಮ್ಮ ಆಪ್ತೇಷ್ಟರ ಭೇಟಿಯಾದ ಸಂತೋಷ ಸಿಗಲಿದೆ.