ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಬೆಂಗಳೂರು| Krishnaveni K| Last Modified ಸೋಮವಾರ, 22 ಫೆಬ್ರವರಿ 2021 (08:42 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

 
ಮೇಷ: ಬಯಸಿದ ವಸ್ತು ತಾನಾಗಿಯೇ ನಿಮ್ಮ ಕೈ ಸೇರುವ ಸಂದರ್ಭ ಒದಗಿಬರಲಿದೆ. ಮಾನಸಿಕವಾಗಿ ಬೇಡದ ಯೋಚನೆಗಳನ್ನು ಬದಿಗಿಟ್ಟು ಹಗುರವಾಗಿ. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಚಿಂತೆ ಬೇಡ.
 
ವೃಷಭ: ಅರ್ಧಕ್ಕೇ ನಿಂತ ಕೆಲಸಗಳಿಗೆ ಚಾಲನೆ ನೀಡಲು ಇದು ಸಕಾಲ. ಆರ್ಥಿಕವಾಗಿ ಹಣಕಾಸಿನ ಮುಗ್ಗಟ್ಟುಗಳು ಸರಿ ಹೋಗಲಿವೆ. ಸರಕಾರಿ ಕೆಲಸದವರಿಗೆ ಮುಂಬಡ್ತಿ ಯೋಗವಿದೆ. ಪಾಲಿಗೆ ಬಂದ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು.
 
ಮಿಥುನ: ನಿಮ್ಮ ಅಹಂ ಗುಣಗಳನ್ನು ಬದಿಗಿಟ್ಟು ಕೆಲಸ ಮಾಡಿದರೆ ನಿಮ್ಮ ದಾರಿ ಸುಗಮವಾಗಲಿದೆ. ವೈಯಕ್ತಿಕ ವಿಚಾರಗಳನ್ನು ಆಪ್ತರೊಂದಿಗೆ ಹಂಚಿಕೊಂಡು ಹಗುರವಾಗಲಿದ್ದೀರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ.
 
ಕರ್ಕಟಕ: ನಿಮ್ಮ ಸಮಕಾಲೀನರ ಜೊತೆ ಕೂಡುವ ಯೋಗ ಕೂಡಿಬರಲಿದೆ. ಆರ್ಥಿಕವಾಗಿ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವುದು ಒಳಿತು. ಯೋಗ್ಯ ವಯಸ್ಕರಿಗೆ ಉತ್ತಮ ಸಂಬಂಧಗಳು ಕೂಡಿಬರಲಿವೆ. ದೇವತಾ ಪ್ರಾರ್ಥನೆ ಮಾಡಿ.
 
ಸಿಂಹ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಏಳಿಗೆಯ ಬಗ್ಗೆ ಅಸೂಯೆಪಡುವವರು ಇರುತ್ತಾರೆ. ಅವರ ಬಗ್ಗೆ ಉಪೇಕ್ಷೆ ಮಾಡುವುದೇ ಉತ್ತಮ. ಮಹಿಳೆಯರಿಗೆ ಅಲಂಕಾರಿಕ ವಸ್ತುಗಳ ಖರೀದಿಗೆ ಖರ್ಚು ವೆಚ್ಚಗಳಾದೀತು. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
 
ಕನ್ಯಾ: ದೂರ ಸಂಚಾರಕ್ಕೆ ಸಿದ್ಧರಾಗಿದ್ದರೆ, ದಿಡೀರ್ ರದ್ದಾಗಲಿದೆ. ಅನಿವಾರ್ಯ ಸಂದರ್ಭಗಳಲ್ಲಿ ಕೆಲವೊಂದು ತ್ಯಾಗ ಮಾಡಬೇಕಾಗಿ ಬರುತ್ತದೆ. ಸಂಗಾತಿಯ ಸಂತೋಷಕ್ಕೆ ಬೆಲೆ ಕೊಡಬೇಕಾಗುತ್ತದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.
 
ತುಲಾ: ನಿಮ್ಮ ಪಾಲಿಗೆ ಬರಬೇಕಾದ ವಸ್ತು, ವ್ಯಕ್ತಿಗಳು ಬೇಡವೆಂದರೂ ಬಂದೇ ಬರುತ್ತಾರೆ. ಅದರ ಬಗ್ಗೆ ಅನಗತ್ಯ ಚಿಂತೆ ಬೇಡ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳಿಗೆ ಸಿದ್ಧರಾಗಬೇಕಾಗುತ್ತದೆ. ಪತ್ನಿಯ ಪ್ರೀತ್ಯಾದರಗಳಿಗೆ ಪಾತ್ರರಾಗಲಿದ್ದೀರಿ.
 
ವೃಶ್ಚಿಕ: ವೃತ್ತಿರಂಗದಲ್ಲಿ ನಿಮ್ಮ ಕ್ರಿಯಾತ್ಮಕ ಯೋಚನೆಗಳು ಉಪಯೋಗಕ್ಕೆ ಬರಲಿವೆ. ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ವೈಯಕ್ತಿಕ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಇಷ್ಟಭೋಜನ ಪ್ರಾಪ್ತಿಯಾಗಲಿದೆ.
 
ಧನು: ಬೇರೆಯವರ ವಿಚಾರದಲ್ಲಿ ಅನಗತ್ಯವಾಗಿ ಮೂಗು ತೂರಿಸುವ ಯತ್ನ ಬೇಡ. ಇದರಿಂದ ವೈಯಕ್ತಿಕವಾಗಿ ಮಾನಹಾನಿಯಾದೀತು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಲಹೆಗಳನ್ನು ಪಾಲಿಸಬೇಕಾಗುತ್ತದೆ.
 
ಮಕರ: ಮನಸ್ಸಿಗೆ ಹಿಡಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ಇಷ್ಟದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿದರೆ ಕೈ ಹಿಡಿದ ಕೆಲಸಗಳು ಸುಗಮವಾಗಲಿದೆ. ಕಟ್ಟಡ ಕಾಮಗಾರಿ ಕೆಲಸಕ್ಕೆ ಚಾಲನೆ ನೀಡಬಹುದು.
 
ಕುಂಭ: ಸಂಗಾತಿಯ ಮಾತಿಗೆ ಬೆಲೆಕೊಟ್ಟು ಕೆಲವೊಂದು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆರ್ಥಿಕವಾಗಿ ಹಣಕಾಸಿನ ಸಮಸ್ಯೆಗಳು ದೂರವಾಗಲಿದೆ. ಮನೆ ರಿಪೇರಿ, ವಾಹನ ಖರೀದಿ ಇತ್ಯಾದಿ ಕೆಲಸಗಳಿಗೆ ವೆಚ್ಚ ಮಾಡಲಿದ್ದೀರಿ. ತಾಳ್ಮೆಯಿರಲಿ.
 
ಮೀನ: ನೀವು ಇಂದು ಕೈಗೊಳ್ಳುವ ಪ್ರತಿ ನಿರ್ಧಾರವೂ ಎಚ್ಚರಿಕೆಯಿಂದಿರಲಿ. ಒಂದನ್ನು ಮಾಡಲು ಹೋಗಿ ಇನ್ನೊಂದನ್ನು ಕಳೆದುಕೊಳ್ಳುವ ಸ್ಥಿತಿ ತಂದುಕೊಳ್ಳಬೇಡಿ. ಸ್ವಯಂ ವ್ಯಾಪಾರಿಗಳಿಗೆ ಆರ್ಥಿಕವಾಗಿ ಮುನ್ನಡೆ ಸಿಗಲಿದೆ. ಚಿಂತೆ ಬೇಡ.
ಇದರಲ್ಲಿ ಇನ್ನಷ್ಟು ಓದಿ :