ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ. ಮೇಷ: ವೃತ್ತಿರಂಗದಲ್ಲಿ ಬಿಡುವಿಲ್ಲದ ಕಾರ್ಯದೊತ್ತಡದಿಂದ ದೇಹಾಯಾಸವಾದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಾಭವಾಗಲಿದೆ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ದಿನದಂತ್ಯಕ್ಕೆ ಅಚ್ಚರಿಯ ಸುದ್ದಿ.ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆಗೊಳಗಾಗಲಿದ್ದೀರಿ. ನೀವು ಕೈಗೊಳ್ಳುವ ನಿರ್ಧಾರಗಳಿಂದ ನಿಮ್ಮ ಜೀವನ ಬದಲಾಗಲಿದೆ. ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ವೃದ್ಧಿಯಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.ಮಿಥುನ: ಆರ್ಥಿಕವಾಗಿ ಅಧಿಕ ಖರ್ಚು ವೆಚ್ಚಗಳಾದೀತು. ಉದ್ಯೋಗ ಕ್ಷೇತ್ರದಲ್ಲಿ